MAITHILI RAGHUPATHI

Classics Fantasy Others

4.3  

MAITHILI RAGHUPATHI

Classics Fantasy Others

ಸೀಕ್ರೆಟ್ ಸಂತ

ಸೀಕ್ರೆಟ್ ಸಂತ

1 min
229


ಪ್ರತಿಷ್ಠಿತ ಸುದ್ದಿ ವಾಹಿನಿಯಲ್ಲಿ ಕೆಲಸ ಮಾಡ್ತಾ ಇದ್ದ ಸಂದರ್ಭ ಅದು. ಡಿಸೆಂಬರ್ ತಿಂಗಳು ಬಂತು ಅಂದ್ರೆ ಸಾಕು ಆಫೀಸಲ್ಲಿ ಒಂದು ರೀತಿ ಸಂಭ್ರಮದ ವಾತಾವರಣ ರೂಪಗೊಳ್ತಾ ಇತ್ತು. ಆ ಸಲ ನನಗೆ ಇನ್ನೂ ಸ್ಪೆಷಲ್ ಆಗಿತ್ತು. ಏಕೆಂದರೆ ನಾನು ಜಾಬ್ ಬಿಡಬೇಕು ಅಂತ ಇದ್ದದ್ರಿಂದ ಅದೇ ನಂಗೆ ಅಲ್ಲಿ ಕಡೇ ಡಿಸೆಂಬರ್ ಕೂಡಾ ಆಗಿತ್ತು.. ಕ್ರಿಸ್ ಮಸ್ ಹತ್ರ ಬಂತು. ಸೀಕ್ರೆಟ್ ಸಂತ ಅಂತ ಚೀಟಿ ಮಾಡಿ ಆಫೀಸಲ್ ಇರೋರ ಹೆಸ್ರೆಲ್ಲ ಒಂದೊಂದು ಚೀಟಿಲಿ ಬರ್ದು ಒಬ್ಬೊಬ್ರು ಒಂದೊಂದು ಚೀಟಿ ಎತ್ತಿ ಅದರಲ್ಲಿ ಯಾರ ಹೆಸರು ಇದೆಯೋ ಅವ್ರಿಗೆ ಏನಾದ್ರೂ ಗಿಫ್ಟ್ ಕೊಡಬೇಕು ಎನ್ನುವುದು ಪದ್ದತಿ. ನಂಗೆ ಟೀಮ್ ಲೀಡರ್ ಹೆಸ್ರೇ ಬಂದಿತ್ತು ಖುಷಿಲಿ ಅವತ್ತೇ ಗಿಫ್ಟ್ ಅಂಗಡಿಗೆ ಹೋಗಿ ವಾಲ್ ಹ್ಯಾಂಗಿಗ್ ತಂದು ಪ್ಯಾಕ್ ಮಾಡಿ ಮರ್ದಿನ ಅವರು ಬರುವುದಕ್ಕೂ ಮೊದಲೇ ಅವ್ರ ಟೇಬಲ್ ಮೇಲೆ ಗಿಫ್ಟ್ ಇಟ್ಟು ಕೆಲಸ ಮಾಡುತ್ತಾ ಕುಳಿತೆ. ಅವರು ಬಂದು ಗಿಫ್ಟ್ ಓಪನ್ ಮಾಡಿ ಇಷ್ಟ ಪಟ್ಟಾಗ ಖುಷಿ ಕೂಡಾ ಪಟ್ಟೆ. ಯಾರು ಗಿಫ್ಟ್ ಇಟ್ಟವರೆಂದು ನನಗೂ ಗೊತ್ತಿಲ್ಲ ಎಂಬಂತೆ ನಾಟಕ ಕೂಡಾ ಮಾಡಿ ಕೆಲಸದಲ್ಲಿ ನಿರತಳಾದೆ. ನನಗೂ ಗಿಫ್ಟ್ ಬರಬಹುದಲ್ಲ ಎಂಬ ಕುತೂಹಲದಿಂದ.. ನನಗೆ ಅವತ್ತು ಯಾರೂ ಗೆಫ್ಟೇ ಕೊಟ್ಟಿರಲಿಲ್ಲ. ಮಾರನೇ ದಿನ ನಾನು ಆಫೀಸಿಗೆ ಸೆಕೆಂಡ್ ಶಿಫ್ಟ್ ಗೆ ಹೋದೆ. ಮಧ್ಯಾಹ್ನ ಮೂರು ಗಂಟೆಗೆ ಆಫೀಸಿಗೆ ಹೋದಾಗ ಗಿಫ್ಟ್ ಟೇಬಲ್ ಮೇಲೆ ಇತ್ತು. ನೀನು ಮಾತ್ರ ನೋಡು ಯಾರಿಗೂ ತೋರಿಸಬೇಡ ಅಂತ ಇಂಗ್ಲೀಷಲ್ ಬರ್ದಿತ್ತು. ಖುಷಿಯಿಂದ ರಾತ್ರೆ ಹನ್ನೊಂದುಕ್ಕೆ ಗಿಫ್ಟ್ ಸಮೇತ ಮನೆಗೆ ಬಂದೆ ಗಿಫ್ಟ್ ಕವರ್ ಒಳಗೊಂದು ಕವರ್, ಅದ್ರ ಒಳಗೆ ಮತ್ತೊಂದು ಈ ಮದುವೆನಲ್ಲಿ ಎಲ್ಲ ಕೊಡ್ತಾರಲ ಹಾಗೆ.... ಪ್ಯಾಕಿಂಗ್ ಇತ್ತು. ಓಪನ್ ಮಾಡಿದೆ ಮಾಡಿದೆ ಕೊನೆಗೆ ಒಂದು ಬಿಳಿಯ ಬಣ್ಣದ ದಾರದ ಉಂಡೆ ಇತ್ತು. ಅದರ ಮೇಲೆ ಸ್ವಾರಿ ಏನೂ ತರೋದಿಕ್ಕೆ ಆಗ್ಲಿಲ್ಲ ಅಂತ ಬರ್ದಿತ್ತು. ಆ ಗಿಫ್ಟ್ ನನಗೆ ತುಂಬಾ ಖುಷಿ ಕೊಟ್ಟಿತ್ತು. ಆದರೆ ಮನೆ ಶಿಫ್ಟ್ ಮಾಡುವಾಗ ಎಲ್ಲಿಯೋ ಕಳೆದು ಹೋಗಿ ಮನಸ್ಸಿಗೆ ಬೇಸರವಾಗಿ ಹೋಯ್ತು.



Rate this content
Log in

Similar kannada story from Classics