Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

#Love Song

SEE WINNERS

Share with friends

ಪ್ರೇಮಿಗಳ ದಿನಾಚರಣೆಯ ಶುಭಾಶಯಗಳು! ಇದು ಪ್ರೀತಿಯ ಸಮಯ, ಪ್ರೀತಿಸುವ ಸಮಯ! ಪ್ರೀತಿಯನ್ನು ಆಚರಿಸಲು, ಸಂಭ್ರಮಿಸಲು ನಮ್ಮ ಪ್ರೇಮಗೀತೆ (ಲವ್ ಸಾಂಗ್) ಸ್ಪರ್ಧೆಯಲ್ಲಿ ಭಾಗವಹಿಸುವುದಕ್ಕಿಂತ ಉತ್ತಮವಾದ ಮಾರ್ಗ ಯಾವುದಿದೆ.

ಸ್ಟೋರಿಮಿರರ್ "ಲವ್ ಸಾಂಗ್" ಸ್ಪರ್ಧೆಯ ಭಾಗವಾಗಲು ನಿಮ್ಮನ್ನು ಆಹ್ವಾನಿಸುತ್ತದೆ. ಇದು ಸಂಗೀತದ ಮೂಲಕ ನಿಮ್ಮ ಪ್ರೀತಿ ಭಾವನೆಗಳು ಮತ್ತು ಸೃಜನಶೀಲತೆಯನ್ನು ವ್ಯಕ್ತಪಡಿಸುವ ಅವಕಾಶವಾಗಿದೆ. ಈ ವಿಶೇಷ ದಿನದ ಸಾರವನ್ನು ಉಣಬಡಿಸುವ ಅತ್ಯಂತ ಹೃದಯಸ್ಪರ್ಶಿ ಮತ್ತು ರೋಮ್ಯಾಂಟಿಕ್ ಪ್ರೇಮಗೀತೆಗಳನ್ನು ನಾವು ನಿಮ್ಮಿಂದ ಎದುರು ನೋಡುತ್ತಿದ್ದೇವೆ.

ಥೀಮ್-

ನೀವು ಸಲ್ಲಿಸುವ ನಿಮ್ಮ ಪ್ರೀತಿಯ ಹಾಡು ಸ್ವಂತದ್ದಾಗಿರಬೇಕು ಮತ್ತು ಪ್ರೀತಿಯ ಬಗ್ಗೆ ನಿಮ್ಮ ವೈಯಕ್ತಿಕ ಭಾವನೆಗಳನ್ನು ವ್ಯಕ್ತಪಡಿಸಬೇಕು. ಆ ಪ್ರೀತಿ ವರ್ತಮಾನದ್ದಾಗಿರಬಹುದು ಇಲ್ಲವೇ, ಮುಗಿದು ಹೋದ ಪ್ರೀತಿ ಅಧ್ಯಾಯದ ಒಂದು ಸವಿನೆನಪಾಗಿರಬಹುದು ಅಥವಾ ಜೀವನದ ಬಗ್ಗೆ ನೀವು ಹೊಂದಿರುವ ಪ್ರೀತಿಯಾದರೂ ಆಗಿರಬಹುದು.

ಮತ್ತೇಕೆ ತಡ, ನಿಮ್ಮ ಅದ್ಭುತ ಪ್ರೇಮಗೀತೆಯನ್ನು ರಚಿಸಲು, ಜಗತ್ತಿಗೆ ಅದರ ಸವಿ ಉಣಬಡಿಸಲು ಸಿದ್ಧರಾಗಿ. ಪ್ರೀತಿಯನ್ನು ಹಂಚೋಣ. ಎಲ್ಲರೂ ಒಟ್ಟಾಗಿ ಸುಂದರ ಸಂಗೀತದ ಕಂಪು ಹರಡೋಣ!

ನಿಯಮಗಳು:

  • ನೀವು ಪ್ರೇಮಗೀತೆಯನ್ನೇ ಬರೆಯಬೇಕು ಮತ್ತು ಅದನ್ನು ಕವಿತೆ ವಿಭಾಗದಲ್ಲಿ ಸಲ್ಲಿಸಬೇಕು.
  • ಸ್ಪರ್ಧಿಗಳು ತಮ್ಮ ಸ್ವಂತ ಪ್ರೇಮಗೀತೆಯನ್ನು ಸಲ್ಲಿಸಬೇಕು. ನಕಲಿಸುವುದು ಅಪರಾಧ
  • ನಿಮ್ಮ ಬರಹಗಳ ಸಂಖ್ಯೆಗೆ ಯಾವುದೇ ಮಿತಿಯಿಲ್ಲ. ನಿಮ್ಮಿಂದ ಅಧಿಕ ಪ್ರೇಮಗೀತೆಗಳನ್ನು ಎದುರು ನೋಡುತ್ತೇವೆ 
  • ನಿಮ್ಮ ಬರಹಗಳಿಗೆ ಯಾವುದೇ ಪದಗಳ ಮಿತಿ ಇಲ್ಲ.
  • ಸ್ಪರ್ಧೆಗೆ ಭಾಗವಹಿಸಲು ಯಾವುದೇ ಭಾಗವಹಿಸುವಿಕೆಯ ಶುಲ್ಕವಿಲ್ಲ.

ವಿಭಾಗ:

ಕವಿತೆ

ಭಾಷೆಗಳು:

ಕನ್ನಡ, ಇಂಗ್ಲಿಷ್, ಹಿಂದಿ, ಗುಜರಾತಿ, ತಮಿಳು, ತೆಲುಗು, ಮಲಯಾಳಂ, ಒಡಿಯಾ ಮತ್ತು ಬಾಂಗ್ಲಾ - ಇವುಗಳಲ್ಲಿ ಯಾವುದೇ ಒಂದು ಅಥವಾ ಅನೇಕ ಭಾಷೆಗಳಲ್ಲಿ ನಿಮ್ಮ ಬರಹಗಳನ್ನು ಸಲ್ಲಿಸಬಹುದು

ಬಹುಮಾನಗಳು:

  • ಅಗ್ರ 10 ಪ್ರೇಮಗೀತೆ ಬರಹಗಾರರಿಗೆ ₹149 ಮೌಲ್ಯದ ಸ್ಟೋರಿಮಿರರ್ ಡಿಸ್ಕೌಂಟ್ ವೋಚರ್ ಅನ್ನು ನೀಡಲಾಗುವುದು. ಹಾಗೂ ವಿಜೇತ ಪ್ರಮಾಣಪತ್ರವನ್ನು ಸಹ ನೀಡಲಾಗುವುದು.
  • ಎಲ್ಲಾ ಸ್ಪರ್ಧಿಗಳು ಭಾಗವಹಿಸುವಿಕೆಯ ಪ್ರಮಾಣಪತ್ರವನ್ನು ಪಡೆಯುತ್ತಾರೆ

ಸಲ್ಲಿಕೆ ಹಂತ - ಫೆಬ್ರವರಿ 14, 2023 ರಿಂದ ಮಾರ್ಚ್ 14, 2023 ರವರೆಗೆ 

ಫಲಿತಾಂಶದ ಘೋಷಣೆ: ಏಪ್ರಿಲ್ 10, 2023

ಸಂಪರ್ಕಿಸಿ:

ಇಮೇಲ್: neha@storymirror.com

ದೂರವಾಣಿ ಸಂಖ್ಯೆ: +91 9372458287 / 022-49243888

ವಾಟ್ಸಾಪ್: +91 8452804735