Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

Chethana Bhargav

Classics Inspirational Others

4  

Chethana Bhargav

Classics Inspirational Others

ಅಮ್ಮ

ಅಮ್ಮ

1 min
344


ನವಮಾಸಗಳು ಉದರದಿ ಹೊತ್ತು 

ಕಾಪಾಡುತ ಜತನದಿ ಜೀವದ ಸೊತ್ತು 

ಜನ್ಮವ ನೀಡುವಳು ಈ ತಾಯಿ 

ಜಗನ್ಮಾತೆ ಸ್ವರೂಪಿಣಿ ನಮ್ಮ ಕಾಯಿ 


ಮಮತೆಯ ಕಡಲು ಆರೈಕೆಯಲಿ 

ದಿನರಾತ್ರಿ ಮಗುವ ಪೋಷಿಸುತಲಿ 

ಕಂದನ ಕರೆಗೆ ಓಗೊಟ್ಟು 

ಕಾಯುವಳು ಕಣ್ಣಲಿ ಕಣ್ಣಿಟ್ಟು 


ಮಗುವಿನ ತೊದಲು ನುಡಿಗಳಲಿ 

ದಿನವಹಿ ಆಟ ಪಾಠಗಳಲಿ 

ತುತ್ತನು ನೀಡಿ ಮಲಗಿಸುತ ಲಾಲಿಯಲಿ 

ಮೀರಿಸುವಾರು ಅಮ್ಮನ ತ್ಯಾಗದಲಿ 


ಸಂಸಾರಕೆ ಹೆಗಲನು ಕೊಡುತಿಹಳು 

ಗಂಡಿಗೆ ಸಮನಾಗಿ ದುಡಿದಿಹಳು 

ದಣಿವನೇ ಅರಿಯದ ಯಂತ್ರದ ತರದಿ 

ಮರೆವಳು ತನ್ನನೇ ಮನೆಯನು ಪೊರೆಯುವ ಭರದಿ 


ತಾಯಂದಿರಿಂದಲೇ ಸಮಾಜದ ಔನ್ನತ್ಯ 

ಇರಲಿ ಸದಾ ಅಮ್ಮಂದಿರ ಸಾಂಗತ್ಯ 


ಉದರದೊಳಿಟ್ಟು ಹಡೆದ ಜೀವಕೆ 

ಹೃದಯದೊಳಿಟ್ಟು ಪೂಜಿಸುವ 

ಕಣ್ಣಿಗೆ ಕಾಣುವ ದೇವರು ಇವಳೇ 

ಪ್ರತಿದಿನವೂ ಅಮ್ಮನಿಗೇ ಅರ್ಪಿಸುವ 


Rate this content
Log in

Similar kannada poem from Classics