Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

Chethana Bhargav

Classics Inspirational Others

4  

Chethana Bhargav

Classics Inspirational Others

ಕೈ ಜಾರುತಿದೆ ಸಮಯ

ಕೈ ಜಾರುತಿದೆ ಸಮಯ

1 min
311


ಸದ್ದಿಲ್ಲದೇ ಕೈ ಜಾರುತಿದೆ ಸಮಯ 

ಹಿಡಿದಿಟ್ಟುಕೊಳ್ಳಲಾಗದ ವಿಷಯ 

ಸಿಕ್ಕ ಕ್ಷಣಗಳನ್ನು ವ್ಯಯಿಸದಿರಿ 

ಸುಮಧುರ ಭಾಂದವ್ಯವನ್ನು ಸವಿಯಿರಿ 


ಸಾಗುತಿದೆ ಸಮಯ ಮುಂದೆ ಮುಂದೆ

ಕಳೆದ ಸಮಯ ಬಾರದು ಹಿಂದೆ ಹಿಂದೆ 

ನೆನಪೊಂದೆ ಉಳಿಯುವುದು ಕೊನೆಯ ತನಕ

ಸಮಯದ ಸದುಪಯೋಗವೇ ಜೀವನದ ನಿರ್ಧಾರಕ 

ಸಮಯಕ್ಕೆ ತಕ್ಕಂತೆ ಬದಲಾಗುವರನ್ನು ಮರೆತುಬಿಡಿ 

ಬದಲಾದ ಸಮಯದಲ್ಲಿ ಜೊತೆಗಿರುವವರನ್ನು ನೆನಪಿನಲ್ಲಿಡಿ 

ದಿನವಿಡಿ ತುಂಬಿರುವುದು ಮನೆಗೆಲಸ ಉದ್ಯೋಗದ ಗಡಿಬಿಡಿ 

ನಿಮ್ಮ ಪ್ರೀತಿಪಾತ್ರರಿಗೂ ಸ್ವಲ್ಪ ಸಮಯ ಮೀಸಲಿಡಿ 


ಕಳೆದ ಸಮಯ ಆಡಿದ ಮಾತು ಮತ್ತೆ ಬಾರದು 

ವಿವೇಕ ವಿವೇಚನೆಯ ವರ್ತನೆ ಸುಖವ ತರುವುದು 

ಹರಿಯುತಿದೆ ಕಾಲಪ್ರವಾಹ ಇಂದಿಗೂ ಅನವರತ 

ಇರಲಿ ಮಾನವ ಪ್ರಯತ್ನ ಏಳಿಗೆಯೆಡೆಗೆ ಅವಿರತ 


Rate this content
Log in

Similar kannada poem from Classics