Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

Arjun Maurya

Action Inspirational Thriller

4  

Arjun Maurya

Action Inspirational Thriller

ಮನಸ್ಥಿತಿ

ಮನಸ್ಥಿತಿ

1 min
384

ಚಿಂತೆಗಳು ಸೇರದಿರೆ

ಗೂಡಾಗದು ಮನ I

ರೆಕ್ಕೆ ತೆರೆದ್ಹಾರುವುದು

ಚೈತನ್ಯದಾ ಹಕ್ಕಿ II

ಮನೆಹೊಕ್ಕದಿರೆ ಚಿಂತೆ

ಚಿತೆಯಾಗದು ದೇಹ I

ಬದುಕು ಬರಿದಾಗದು

ವರವಾಗುವುದು II

ವಿಷಯಚಿತ್ತದಾ ಭಿತ್ತಿ

ಕಡಿವಾಣವಿರದದಕೆ I

ಎಲ್ಲೆಂದರಲ್ಲೋಡುವ

ಚಿತ್ತ ನಿಲ್ಲಿಸು ಸ್ಥಿರದತ್ರ II

ಕದಲದಿರಲಿ ಮನ

ಘಟನೆಗಳಾಗರದೀ I

ಹೊಟ್ಟೆಕಿಚ್ಚಿನಾಟದಲೀ

ನಲುಗದಿರಲಿ II

ವಿಧಿಯಾ ಬರಹದೀ

ನಿಂತ ನೀರಾಗದೆ I

ಹರಿವ ನೀರಾಗಲೀ

ಸ್ಥಿರತೆಯಾ ಮನ II

Rate this content
Log in

Similar kannada poem from Action