Harsha Shetty

Drama Tragedy Others

4.5  

Harsha Shetty

Drama Tragedy Others

ಕೃಷ್ಣ ಕುಟೀರ-27

ಕೃಷ್ಣ ಕುಟೀರ-27

2 mins
426


ಜಗನ್ನಾಥನ ಆಸ್ತಿ ಪತ್ರದಲ್ಲಿ ಸಹಿ ತಕೊಂಡ ಮೇಲೆ ಫ್ಯಾಕ್ಟರಿ ಕೆಲಸ ತುಂಬಾ ಜೋರಾಗಿ ನಡೆಯುತ್ತಿತ್ತು.  ಜಯಂದ್ರನು ಊರಿನವರನ್ನೆಲ್ಲ ಪಂಚಾಯತಿಗೆ ಕರೆದು 

 ನೋಡ್ರಪ್ಪ ಇಂದಿನಿಂದ ನೀವೆಲ್ಲ ಕೃಷ್ಣ ಕುಟೀರ ಮನೆಯವರಿಗೆ ಜೀತ ಮಾಡುವುದನ್ನು ಬಿಟ್ಟು ನಮಗೆ ಮಾಡಬೇಕು  ಆವಾಗ ಊರಿನವರೊಬ್ಬರು ಜಯಂದ್ರ ನಿನಗೇನು ತಲೆಕೆಟ್ಟಿದೆಯೇನೋ ಕೃಷ್ಣ ಕುಟೀರ ಜಗನ್ನಾಥ್ ಅವರು ಈಗೇನು ಹಾಸಿಗೆ ಹಿಡಿದಿದ್ದಾರೆ ಅವರ ಮಕ್ಕಳು ಮಾಡಿ ತಪ್ಪಿಗಾಗಿ ಅವರಿಗೆ ಯಾಕೆ ಶಿಕ್ಷೆ ನಾವು ಯಾವತ್ತಿದ್ದರೂ ಕೃಷ್ಣ ಕುಟೀರ ಮನೆಯವರಿಗೆ ಕೆಲಸ ಮಾಡುವುದು.

 

 ಜಯಂದ್ರ : ಹೇ ಮುದುಕ ಇನ್ನು ನಾನು ನಿನ್ನ ದನಿ ಮರ್ಯಾದೆ ಕೊಟ್ಟು ಮಾತಾಡು ಇಲ್ಲದಿದ್ದರೆ ನಿನಗೆ ಅನ್ನ ನೀರು ಇಲ್ಲದ ಹಾಗೆ ಮಾಡುತ್ತೇನೆ. ಆವಾಗ ಆ ಮುದುಕ ನಮಗೆ ಮಾಲೀಕರು ಆಗುವ ಯೋಗ್ಯತೆ ಕೇವಲ ಕೃಷ್ಣ ಕುಟೀರ ಮನೆಯವರ ಹತ್ರನೇ ಇದೆ ಯಾವುದು ಬೀದಿ ಹೋಗುವ ನಾಯಿ ನಮ್ಮನ್ ಮೇಲೆ ಯಜಮಾನ ಸಾಧಿಸ್ಲಿಕ್ಕೆ ನೋಡಿದರೆ ಅದರ ಬಾಲ ಕತ್ತರಿಸಿ ಹಾಕ್ತಿವಿ .


 ಜಯಂದ್ರ : ಏ ಮುದುಕ ನನ್ನ ನಾಯಿ ಅಂಥ ಹೇಳ್ತೀಯಾ ಬೇರೆಯವರ ಮನೆಯಲ್ಲಿ ಭಿಕ್ಷೆ ಬೇಡಿ ಬದುಕುವ ನೀನು ನಿನಗೆ ಎಷ್ಟು ಕೊಬ್ಬು ಎಂದು ಹೇಳಿ ಆತನತ್ರ ಧಾವಿಸಿ ಆತನ ಕೆನ್ನೆ ಮೇಲೆ ಬಾರಿಸಿ ಆತನ ನೆಲಕ್ಕೆ ಬೀಳಿಸಿ ಒದೆದನು ಇವತ್ತು ನಾಳೆ ಸಾಯುವಾಗಿದೆ ಈ ಜಯಂದ್ರನಿಗೆ ಎದುರು ಮಾತಾಡ್ತೀಯಾ ಆವಾಗ ಹಳ್ಳಿಯವರೆಲ್ಲ ಸಿಟ್ಟಿಗೆದ್ದು ಜಯಂದ್ರನ ಮೇಲೆ ಮುಗಿಬಿದ್ದರು. 


 ಜಯಂದ್ರ : ಯಾರಾದರೂ ನನ್ನ ಮೈ ಮುಟ್ಟಿದರೆ ಜಾಗೃತಿ. ನಾನು ಈಗ ನಿಮ್ಮ ಒಡೆಯ ಇಲ್ನೋಡಿ ಇದು ಆಸ್ತಿ ಪತ್ರ ಜಗನ್ನಾಥ ಹಾಗೂ ಅವನ ಮಕ್ಕಳು ತಮ್ಮ ಎಲ್ಲಾ ಆಸ್ತಿ ನನ್ನ ಹೆಸರಿಗೆ ಮಾಡಿದ್ದಾರೆ ಈಗ ನೀವೆಲ್ಲಾ ನನ್ನ ಒಳಗೆ ಕೆಲಸ ಮಾಡುವ ಜೀತದಾಳುಗಳು ಯಾರಾದರೂ ನನ್ನ ಮಾತು ಕೇಳದಿದ್ದರೆ ನಿಮ್ಮ ಗ್ರಹಚಾರ ಬಿಡಿಸಿ ಬಿಡ್ತೀನಿ. ಇನ್ನು ಮುಂದೆ ಯಾವ ಪಾಲು ನೀವು ಕೃಷ್ಣ ಕುಟೀರ ಮನೆಯವರಿಗೆ ಕೊಡುತ್ತಿದ್ದೀರಿ ಅದು ನನಗೆ ಬರಬೇಕು. ಇಲ್ಲದಿದ್ದರೆ ನಿಮ್ಮ ಗ್ರಹಚಾರ ಬಿಡಿಸಿ ಬಿಡ್ತೀನಿ. ಇದು ಕೃಷ್ಣ ಕುಟೀರ ಮನೆಯವರಿಗೆ ತಿಳಿದರು ಜಯಂದ್ರನ ಜೊತೆ ಹೋರಾಡುವವರು ಯಾರು ಉಳಿದಿರಲಿಲ್ಲ ಅವರ ಗಣಿ ಪಾಲು ಜಯಂದ್ರ ಹೋಗುವುದರಿಂದ ಕೃಷ್ಣ ಕುಟರ ಮನೆಯವರಿಗೆ ದಿನದ ಊಟಕ್ಕೂ ಕಷ್ಟವಾಗುತ್ತಿತ್ತು ತಿಮ್ಮ ಕೂಡ ಕೃಷ್ಣ ಕುಟೀರ ಮನೆಯಲ್ಲಿ ಬಿಟ್ಟು ಬೇರೆ ಕಡೆ ಕೆಲಸ ಮಾಡಲು ಶುರು ಮಾಡಿದನು ಒಳ್ಳೆ ರಾಜರಂತೆ ಬದುಕುತ್ತಿದ್ದ ಕೃಷ್ಣ ಕುಟರ ಮನೆಯವರಿಗೆ ಈಗ ಒಂದು ಹೊತ್ತು ಊಟಕ್ಕೂ ಕಷ್ಟವಾಗುತ್ತಿತ್ತು ಅದನ್ನು ತಿಳಿದ ವೈಕುಂಠ ಪುರದ ಊರಿನವರು ಕೃಷ್ಣ ಕುಟೀರ ಮನೆಯವರನ್ನು ಸಹಾಯ ಮಾಡಲು ಪ್ರಾರಂಭಿಸಿದರು ಅಲ್ಪಸ್ವಲ್ಪ ಜಯಂದ್ರನಿಗೆ ಕೊಟ್ಟ ಪಾಲಿಂದ ಉಳಿದಿದ್ದರೆ ಅದನ್ನು ತಾವು ತಿಂದು ಸ್ವಲ್ಪವನ್ನು ಕೃಷ್ಣ ಕುಟೀರ ಮನೆಯವರಿಗೆ ಕೊಡುತ್ತಿದ್ದರು ಅದನ್ನು ತಿಳಿದ ಜಯಂದ್ರನು ಯಾರಾದರೂ ಕೃಷ್ಣ ಕುಟೀರ ಮನೆಯವರಿಗೆ ಸಹಾಯ ಮಾಡಿದರೆ ಅವರತ್ರ ಎರಡು ಪಾಲು ಅಷ್ಟು ಗಣಿತಕೊಳ್ತೀನಂತ ಬೆದರಿಸಿದನು ಜಯಂದ್ರನ ಹೆದರಿಕೆಯಿಂದ ಯಾರು ಕೂಡ ಕೃಷ್ಣ ಕುಟೀರ ಮನೆಯವರಿಗೆ ಸಹಾಯ ಮಾಡಲು ಬರುತ್ತಿರಲಿಲ್ಲ ದಿನ ಹೋದಂತೆ ಜಯಂದ್ರ ಮತ್ತು ವಿಜಯೇಂದ್ರ ದಬ್ಬಾಳಿಕೆ ತುಂಬಾ ಹೆಚ್ಚು ಆಗುತ್ತಾ ಹೋಗುತ್ತಿತ್ತು.


 ಇಲ್ಲಿ ಕೃಷ್ಣ ಕುಟರ ಮನೆಯವರಿಗೆ ಊಟ ಮಾಡಲು ಕಷ್ಟವಾಗುತ್ತಿತ್ತು ವಿಭಾ ಜಯಂದ್ರ ನ ಕಣ್ಣು ತಪ್ಪಿಸಿ ಊರಿನವರಿಂದ ಕಾಡಿಬೇಡಿ ಸ್ವಲ್ಪ ಅಕ್ಕಿ ಬೇಳೆ ಸಾಲ ತಂದು ತಮ್ಮನೆಯವರಿಗೆ ಊಟ ಮಾಡಿ ಹಾಕುತ್ತಿದ್ದಳು 

 ದನದ ಕೊಟ್ಟಿಗೆಯಲ್ಲಿರುದ್ಧ ಚಕ್ರವರ್ತಿ ನಾಲ್ಕು ದಿನದಿಂದ ಉಪವಾಸ ಬಿದ್ದಿದ್ದ ಹಾಗೂ ಊಟಕ್ಕಾಗಿ ಜಗನ್ನಾಥನನ್ನು ದಿಟ್ಟಿಸಿ ದಿನಾಲೂ ನೋಡುತ್ತಿದ್ದ ಯಾವಾಗಾ ಜಗನ್ನಾಥನು ಎದ್ದು ಬಂದು ತನಗೆ ಊಟ ತಿನ್ನುಸುವದೆಂದು ಕಾಯುತ್ತಾ ಕೂತಿದ್ದ. ಅಂದು ಒಂದಿನ ವಿಭಾ ಜಗನ್ನಾಥನಿಗೆ ಊಟ ತಿನಿಸುತ್ತಿರುವಾಗ ಆತ ತುತ್ತನ್ನು ತಿನ್ನಲು ನಿರಕರಿಸಿದನು ವಿಭಾ ಎಷ್ಟು ಬಲವಂತ ಮಾಡಿದರು ಆತ ತುತ್ತು ಉಣ್ಣಲು ನಿರಾಕರಿಸಿದನು ಹಾಗೂ ತಿರುಗಿ ಕೊಟ್ಟಿಗೆಯತ್ರನೇ ನೋಡುತ್ತಿದ್ದೆ 


 ವಿಭಾ : ಯಾಕ್ರಿ ಹಠ ಮಾಡ್ತಿದ್ದೀರಾ ಇಲ್ಲಿ ನಮಗೆ ತಿನ್ನಲಿಕ್ಕೆ ಅನ್ನವಿಲ್ಲ ಅದರಲ್ಲಿ ಆ ದರಿದ್ರಾಗೆ ತಿನ್ನಿಸಲು ನಾವು ಎಲ್ಲಿಂದ ತರಲಿ ನಾನು ಎಷ್ಟು ನಿರಾಕರಿಸಿದರು ನೀವು ಆತನನ್ನು ಮನೆಯೊಳಗೆ ಕರ್ಕೊಂಡು ಬಂದಿರಿ ಆ ಆನಿಷ್ಟ ಬಂದ ಮೇಲೆ ನಮಗೆ ದರಿದ್ರ ಹಿಡಿದದು ಸುಮ್ಮನೆ ಊಟ ಮಾಡ್ರಿ ಇಲ್ಲದಿದ್ದರೆ ನಿಮ್ಮ ಆರೋಗ್ಯ ಏನಾಗಬಹುದು ಆದರೂ ಜಗನ್ನಾಥನ್ನು ತುತ್ತನ್ನು ಉಣ್ಣಲು ನಿರಾಕರಿಸಿದನು 

 ಅದನ್ನು ನೋಡಿದ ಸುರೇಂದ್ರನ ತನ್ನ ಮತ್ತು ತನ್ನ ಅಮ್ಮನ ಪಾಲಿನ ಸ್ವಲ್ಪ ಅನ್ನವನ್ನು ತಟ್ಟೆಯಲ್ಲಿ ಹಾಕಿ ಹೋಗಿ ಚಕ್ರವರ್ತಿಗೆ ಕೊಟ್ಟನು ಚಕ್ರವರ್ತಿ ತಿಂದಾ ನಂತರ ತಾನು ತಿನ್ನಲು ಆರಂಭಿಸಿದ. 


Rate this content
Log in

Similar kannada story from Drama