Harsha Shetty

Abstract Drama Others

4.5  

Harsha Shetty

Abstract Drama Others

ಕೃಷ್ಣ ಕುಟೀರ ಭಾಗ 29

ಕೃಷ್ಣ ಕುಟೀರ ಭಾಗ 29

3 mins
56


ಜಯಂದ್ರ ಕೃಷ್ಣನ ಕುಟೀರ ಮನೆಯ ಬಾಗಿಲನ್ನು ಸಮೀಪಿಸಿ ಒಳಗೆ ಹೋಗಲು ಪ್ರಯತ್ನಿಸಿದಾಗ, ಅವನ ಮನಸ್ಸಿನಲ್ಲಿ ವಿಚಿತ್ರವಾದ ಭಯವು ಆರಂಭವಾಯೀತು.ಯಾಕೋ ಕೃಷ್ಣ ಕುಟೀರ ಮನೆಯ ಹೊಸ್ತಿಲು ದಾಟಲು ಆತನೀಗ ಧೈರ್ಯವೇ ಸಾಲುತ್ತಿರಲಿಲ್ಲ ಒಮ್ಮಲೇ ಹೊಸ್ತಿಲಿನ ಹತ್ತಿರ ಬಂದು ಸ್ಥಿರವಾಗಿ ನಿಂತು ಬಿಟ್ಟ ಅದನ್ನು ಗಮನಿಸಿದ ವಿಜೇಂದ್ರನು


ವಿಜೇಂದ್ರ : ಜಯಂದ್ರ ಏನಾಯ್ತು ತನ್ನಲ್ಲಿದ್ದ ಪಿಸ್ತೂಲ್‌ನ್ನು ಜಯಂದ್ರನಿಗೆ ಕೊಟ್ಟು ಹ್ಮ್ಮ್ ನುಗ್ಗು ಈಗ ನಿನ್ನನ್ನು ತಡೆಯಲು ಆ ವಿಶ್ವನಾಥನು ಇಲ್ಲ ಜಗನ್ನಾಥನಿಗೆ ಆ ಶಕ್ತಿ ಸಾಮರ್ಥ್ಯ ಉಲಿದಿಲ್ಲ ಹಾಗು ಆ ಶೇಷ ಕೂಡ ಇಲ್ಲ 

ಅವಾಗ ಅಲ್ಲಿಗೆ ಧಾವಿಸಿದ ಸುರೇಂದ್ರನು

ಸುರೇಂದ್ರ : ಆದರೆ ಅವನ ತಮ್ಮಸುರೇಂದ್ರ ಇದ್ದಾನೆ 

ಆವಾಗ ಮನೆಯ ನಾಯಿಯಾದ ಲಕ್ಕಿ ಕೂಡ ಬಂದು ಮನೆಯ ಹೊಸ್ತಿಲಿನಲ್ಲಿ ನಿಂತು ಬಿಡ್ತು ಹಾಗೂ ಬೊಗಳಲು ಪ್ರಾರಂಭಿಸಿತು ಒಳಗೆ ಬಂದರೆ ನಿಮ್ಮೆಲ್ಲರನ್ನು ಹರಿದು ಹಾಕುತ್ತೀನಿ ಎಂಬಂತೆ ಅದರ ವ್ಯವಹಾರ ವಿತ್ತು. ಆವಾಗ ಅಲ್ಲಿಗೆ ವಿಭಾ ಕೂಡ ಬಂದಳು


 ಜಯಂದ್ರ : ಲೇ ಸುರೇಂದ್ರ ನೀನೊಬ್ಬ ಬಚ್ಚಾ ನೀನೇನು ನನ್ನನ್ನು ತಡೆಯುವುದು ಎಂದು ಹೇಳಿ ಸುರೇಂದ್ರನ ಕೆನ್ನೆಗೆ ಬಾರಿಸಿದ ಸುರೇಂದ್ರ ಮೂರಡಿ ಆಚೆ ಹೋಗಿ ಬಿದ್ದನು ಆವಾಗ ಲಕ್ಕಿ ಬೊಗಳುತ್ತಾ ಜಯಂದ್ರ ಮೇಲೆ ಪ್ರಹಾರ ಮಾಡಲು ಪ್ರಯತ್ನಿಸಿತು ಆವಾಗ ಜಯಂದ್ರ ತನ್ನ ಪಿಸ್ತೂಲಿನಿಂದ ಲಕ್ಕಿಯ ಹೊಟ್ಟೆಗೆ ಗುಂಡಿಕ್ಕಿದನು ಲಕ್ಕಿ ಆರು ಅಡಿ ಆಚೆ ಹೋಗಿ ಜಗನ್ನಾಥ ಮಲಗಿದ ಮಂಚದ ಹತ್ತೀರ ಬಂದು ಬಿತ್ತು. 


ವಿಭಾ ಮತ್ತು ಸುರೇಂದ್ರ ಲಕ್ಕಿ ಎಂದು ಕಿರುಚಿ ಅದರ ಹತ್ತಿರ ಹೋಗಿ ಅದರ ಮೈಯನ್ನು ಸವರಿಸಿದರು 


ವಿಜೇಂದ್ರ ಹೋಗಿ ಅಲ್ಲಿದ್ದ ಒಂದು ಕುರ್ಚಿ ಮೇಲೆ ಕೂತುಕೊಂಡು ಮುಂದೆ ಆಗುವ ದೃಶ್ಯಗಳನ್ನು ಆನಂದಿಸಲು ತೊಡಗಿದ ಅವನ ಹಿಂದೆ ಗನ್ ಮ್ಯಾನ್ , ಅವನ ವಕೀಲ ಹಾಗೂ ಅವನ ಗುಂಡಗಳು ಬಂದು ನಿಂತರು

 ಹಳ್ಳಿ ಜನ ಮತ್ತು ಖಾನ್ ಹೊರಗಡೆ ಅಸಾಯಕವಾಗಿ ಇದನ್ನೆಲ್ಲ ನೋಡುತ್ತಾ ನಿಂತರು

ವಿಭ : ಏ ಜಯಂದ್ರ ಮೂಕ ಪ್ರಾಣಿ ಮೇಲೆ ನಿನ್ನ ಪೌರುಷ ತೋರಿಸ್ತೀಯ ನೀನೊಬ್ಬ ಮನುಷ್ಯನ ನಮ್ಮ ಪೂರ್ವಜರು ನಿನ್ನ ಕುಟುಂಬದವರಿಗೆ ಇಲ್ಲಿ ವಾಸ ಮಾಡಲು ಕೊಟ್ಟಿದ್ದಕ್ಕೆ ಇದೇನಾ ನೀನು ನಮಗೆ ಕೊಡುವ ಮರ್ಯಾದೆ 


ಜಯಂದ್ರ ನು ಕೂತು ಲಕ್ಕಿಯನ್ನು ಸವರಿಸುತ್ತಿದ್ದ ವಿಭಾ ಜುಟ್ಟನ್ನು ಹಿಡಿದು ಮೇಲಕೆತ್ತಿ


 ಜಯಂದ್ರ : ನಿನ್ನ ಮಗ ಶೇಷ ನನಗೆ ಎಷ್ಟು ಸಲ ಪೊಲೀಸ್ ಸ್ಟೇಷನ ಮೆಟ್ಟಿಲು ಹತ್ತುವ ಹಾಗೆ ಮಾಡಿದ ಮತ್ತೆ ಈ ನಿನ್ನ ಗಂಡ ಜಗನ್ನಾಥ ಯಾವಾಗ ನೋಡಿದರೂ ನನ್ನನ್ನು ನಾಯಿಗಿಂತ ಕಡೆಗಣಿಸುತಿದ್ದ ಈಗ ನೋಡು ಹೇಗೆ ಶಾಂತವಾಗಿ ಮಲಗಿದ್ದನೇ ಎಂದು ಹೇಳಿ ಆಕೆಯ ಕೆನ್ನೆಗೆ ಬಾರಿಸಿದನು ಹಾಗೂ ಜಯಂದ್ರನಾ ಇಬ್ಬರು ದಾಂಡಿಗರು ಬಂದು ವಿಭ ಮತ್ತು ಸುರೇಂದ್ರನನ್ನು ಹಿಡಿದುಕೊಂಡರು 


 ಜಯಂದ್ರನು ಜಗನ್ನಾಥ ಮಲಗಿದ ಮಂಚವನ್ನು ಕಳಚಿದ ಆವಾಗ ಜಗನ್ನಾಥ ಉರಳಿಕೊಂಡು ನೆಲದ ಮೇಲೆ ಬಿದ್ದ ಜಯಂದ್ರ ಬಂದು ಜಗನ್ನಾಥನ ಕೆನ್ನೆಯ ಮೇಲೆ ತನ್ನ ಕಾಲನಿಟ್ಟು ಊರಿನ ಜನರನ್ನು ನೋಡಿರೋ ನಿಮ್ಮ ರಕ್ಷಕ ಹೇಗೆ ನನ್ನ ಕಾಲಾಡಿ ಅಸಹ್ಯವಾಗಿ ಬಿದ್ದಿದ್ದಾನೆ.

ಈಗ ಹೇಳು ಜಗನ್ನಾಥ ನಿನ್ನನು ಯಾರು ಕಾಪಾಡ್ತಾರೆ ನಿನ್ನ ಮಗ ಶೇಷ ಜೈಲಲ್ಲಿದ್ದಾನೆ ಮತ್ತೊಂದು ಗುಟ್ಟು ಗೊತ್ತಾ ನಿನಗೆ , ನಿನ್ನಪ್ಪನನ್ನು ಪ್ಲಾನ್ ಮಾಡಿ ಸಾಯಿಸಿದವರು ನಾವೇ ಅದರಲ್ಲಿ ನಿನ್ನಕ್ಕ ನಿಂಗಿ ಕೂಡ ಶಾಮಿಲಾಗಿದ್ದಳು ಕೆಲಸ ಮುಗಿದ ನಂತರ ನಾವೇ ನಿಂಗಿ ಮತ್ತು ಅವಳ ಗಂಡನನ್ನು ಮುಗಿಸಿ ಬಿಟ್ಟಿವಿ ನಿನ್ನ ಶೇಷ ಜೈಲಿಗೆ ಹೋಗಲು ಕೂಡ ನಾವೇ ಕಾರಣ ಬಾ ಎದ್ದು ಬಾ ಬಂದು ನನಗೆ ಹೊಡತೀಯ ಹೊಡೆ ನೋಡೋಣ ಎಂದು ಹೇಳಿ ಜಗನ್ನಾಥನ ಹೊಟ್ಟೆಗೆ ಒದ್ದನು


 ಅದನ್ನು ನೋಡಿದ ಖಾನ್ 

 ಖಾನ್ : ಏ ಜಯಂದ್ರ ನಿನಗೆ ಜಗನ್ನಾಥ್ ಬೈ ಮೇಲೆ ಕೈಮಾಡಲು ಎಷ್ಟು ಧೈರ್ಯ ಎಂದು ಜಯಂದ್ರನ 

 ಕಡೆಗೆ ನುಗ್ಗಿದನು ಆದರೆ ಜಯಂದ್ರ ದಾಂಡಿಗರು ಖಾನ್ ಹೊಡೆದು ಬೀಳಿಸಿದರು 

 ಊರಿನ ಮಂದಿ ಕೂಡ ಖಾನ್ ಮತ್ತು ಜಗನ್ನಾಥನ ಕುಟುಂಬವನ್ನು ಉಳಿಸಲು ಮುಂದೆ ಬಂದರು 

 ಆವಾಗ ವಿಜೇಂದ್ರ ನಾ ಗನ್ ಮ್ಯಾನ್ ತನ್ನ AK 47 ಬಂದೂಕಿನಿಂದ ಊರಿನ ಜನರ ಕಾಲ್ ಕೆಳಗಡೆ ನೆಲಕ್ಕೆ ಹೊಡೆದನು ಅವಾಗ ಪ್ರಾಣ ಭಯದಿಂದ ಊರಿನ ಜನ ಹಿಂಜರಿದರು


ವಿಜೇಂದ್ರ : ಯಾರಾದ್ರೂ ಮುಂದೆ ಬಂದ್ರೆ ಇನ್ನೊಮ್ಮೆ ಗುಂಡು ನೆಲಕ್ಕೆ ಹೊಡೆಯಲ್ಲ ಸೀದಾ ಅವರ ತಲೆಗೆ ಹೊಡೆಯುತ್ತದೆ ನೀವು ನಿಂತಲ್ಲಿ ನಿಂತ್ರೆ ನಿಮಗೆ ಒಳ್ಳೆಯದು

 ಜಯಂದ್ರ ಪುನ ಜಗನ್ನಾಥನ ಮುಖದ ಮೇಲೆ ಕಾಲಿಟ್ಟು ಈಗ ನೋಡಿ ನಿಮ್ಮ ರಕ್ಷಕ ನನ್ನ ಕಾಲಡಿದ್ದಾನೆ ಇನ್ನು ನಿಮ್ಮನ್ನು ರಕ್ಷಿಸಲು ಯಾರು ಬರಲ್ಲ ಇವನು 

ಇರುವ ಪರಿಸ್ಥಿತಿಯಲ್ಲಿ ಸಲ್ಪವೇ ದಿನ ಇವತ್ತು ನಾಳೆ ನೆಗೆದು ಬಿದ್ದು ಹೋಗ್ತಾನೆ 

ಇದನ್ನೆಲ್ಲಾ ದೂರದ ದನದ ಕೊಟ್ಟಿಗೆಯಲ್ಲಿದ್ದ ಚಕ್ರವರ್ತಿ ನೋಡುತ್ತಾ ಯಾವ ಪ್ರತಿಕ್ರಿಯೆ ಮಾಡದೆ ಕೂತಿದ್ದ . ಜಯಂದ್ರ ಜಗನ್ನಾಥನ ಮೇಲೆ ಕಾಲಿಟ್ಟಿದನು ಹಾಗೂ ಜಗನ್ನಾಥನ ಮುಖವು ದನದ ಕೊಟ್ಟಿಗೆಯ ಕಡೆವಿತ್ತು ಅವನ ಮುಖ ಚಕ್ರವರ್ತಿಗೆ ಸ್ಪಷ್ಟವಾಗಿ ಕಾಣುತ್ತಿತ್ತು ಜಗನ್ನಾಥನು ಮನದಲ್ಲೇ  ಮರುಗುತ ವಾಸುದೇವ ಇಷ್ಟಾದರೂ ಇನ್ನು ನನ್ ಮೇಲೆ ನಿನಗೆ ಕರುಣೆ ಬರಲಿಲ್ಲವೇ ಅಂತ ಪಾಪ ನಾನೇನು ಮಾಡಿದ್ದೇನೆ ಪ್ರಭು ಎಂದು ಅಳತೊಡಗಿದನು ಹಾಗೂ ಅವನ ಕಣ್ಣಲ್ಲಿ ನೀರು ಬರಲು ಪ್ರಾರಂಭಿಸಿತು ತಕ್ಷಣವೇ ಜೋರಾದ ಗಾಳಿ ಬೀಸಲು ಆರಂಬವರಿತು ಬೆಳ್ಳಿಯ ವಾಸುದೇವನ ಮೂರ್ತಿಯ ಬೆರಳಿನಲ್ಲಿ ಇದ್ದ ಸುದರ್ಶನ ಚಕ್ರವೂ ಅಲ್ಲಾಡಲು ಪ್ರಾರಂಭಿಸಿ , ಬೀಸಿದ ಗಾಳಿಗೆ ಚಕ್ರವ ವಾಸುದೇವನ ಬೆರಳಿಂದ ಹಾರಿಕೊಂಡು ಹೋಗಿ ಅದೃಶ್ಯ ವಾದಾಗೆ ಭಾಸವಾಯಿತು.


Rate this content
Log in

Similar kannada story from Abstract