Ashritha G

Abstract Classics Others

4  

Ashritha G

Abstract Classics Others

ಮತ್ತೆ ಬರುವೆ...

ಮತ್ತೆ ಬರುವೆ...

2 mins
341



      ಕೈಗೆ ಹಾಕಿದ ಡ್ರಿಪ್ಸ್ ನೋಡುತ್ತಾ ಕಣ್ಣಿನಲ್ಲಿ ಹರಿಯುತ್ತಿದ್ದ ನೀರನ್ನು ಹರಿಯಲು ಬಿಟ್ಟು ತಿರುಗದೆ ನಿಂತು ಫ್ಯಾನ್ ನೋಡುತ್ತಾ ಹೊಟ್ಟೆಯ ಮೇಲೆ ಕೈ ಆಡಿಸಿದಳು.ಮುಂಜಾನೆಯಿಂದ ನೆಡೆದಿದ್ದೆಲ್ಲವನ್ನು ಕಣ್ಣು ಮುಚ್ಚಿ ನೆನೆಯಲು ಪ್ರಾರಂಭಿಸಿದಳು.. ಇನ್ನು ಒಂದು ತಿಂಗಳಷ್ಟೇ ಇರೋದು ಡೆಲಿವರಿಗೆ ಎಲ್ಲಾ ಆರಾಮ್ ಆಗಿ ಆದರೆ ಸಾಕು ಎಂದು ಅಮ್ಮ ಫೋನ್ನಲ್ಲಿ ಮಾತನಾಡುತ್ತಿದ್ದಿದ್ದು ಕೇಳಿಸಿತು..ಕುಳಿತು ಟೀ ವಿ ನೋಡುತ್ತಿದ್ದವಳಿಗೆ ಇದ್ದಕ್ಕಿದ್ದಂತೆ ಹೊಟ್ಟೆ ನೋವು ಪ್ರಾರಂಭವಾಯಿತು.ಅಮ್ಮಾ ಎಂದು ಕಿರುಚಿದಳು.ಓಡಿ ಬಂದ ಅಮ್ಮ ತಡ ಮಾಡದೆ ಡಾಕ್ಟರ್ ಬಳಿ ಕರೆ ತಂದರು..ಮಗುವಿನ ಚಲನ ಅದಾಗಲೇ ನಿಂತ್ತಿತ್ತು.ಹೃದಯ ಬಡಿತ ಕೇಳದಾಗಿತ್ತು.ಬೇರೆ ದಾರಿಯಿಲ್ಲದೆ ಆಪರೇಷನ್ ಮಾಡಿ ಸತ್ತ ಮಗುವನ್ನು ಹೊರ ತೆಗೆದರು..ಎಲ್ಲವೂ ಟೀ ವಿ ಯಲ್ಲಿ ಚಲನ ಚಿತ್ರ ಕಂಡಂತೆ ಭಾಸವಾಯಿತು..ಹಿಂದಿನ ರಾತ್ರಿ ಹೊಟ್ಟೆ ಮುಟ್ಟಿ ಮಗುವಿನೊಂದಿಗೆ ಮಾತನಾಡಿದವಳು ಹೀಗಾಗುವುದೆಂದು ಊಹಿಸಿರಲಿಲ್ಲ..ಜೋರಾಗಿ ಅಳಲಾರಂಭಿಸಿದಳು..ಕೂಗಾಡಿದಳು.. ಡಾಕ್ಟರ್ ಅವಳ ಉದ್ವೇಗ ಕಡಿಮೆ ಮಾಡಲು ಇಂಜೆಕ್ಷನ್ ಕೊಟ್ಟು ಹೋದರು.. ಮಗುವನ್ನು ನೆನೆದು ಅಳುತ್ತಲೇ ನಿದ್ದೆಯ ಮಂಪರಿಗೆ ಜಾರಿದಳು....

‌            ಅಮ್ಮಾ...! ದ್ವನಿ ಕೇಳಿಸಿತು ಎಲ್ಲಿಯೂ ಕಾಣಲಿಲ್ಲ.ಹುಡುಕಾಡಿದಳು...ಅಮ್ಮಾ ನಾನು ಇಲ್ಲೇ ಇದ್ದೀನಿ ನಿನ್ನ ಕಣ್ಣಿಗೆ ಕಾಣುತ್ತಿಲ್ಲ..ಮಲಗು ಆಯಾಸ ಮಾಡಿಕೊಳ್ಳಬೇಡ..ಅಮ್ಮಾ ನೀನು ನನ್ನನ್ನು ಎಷ್ಟು ಜೋಪಾನ ಮಾಡಿ ನೋಡಿಕೊಂಡಿದ್ದೀಯ..8 ತಿಂಗಳು ಹಗಲು ರಾತ್ರಿ ನನಗಾಗಿ ದಣಿದಿರುವೆ..ಈಗ ನಾನ್ನಿಲ್ಲ ಎಂದು ಕೊರಗುತ್ತಾ ದಣಿಯುತ್ತಿರುವೆ... ಅಮ್ಮ ನಾನ್ನಿಲ್ಲ ಅಂತ ಕೊರಗಬೇಡ..ನೀನು ಅಳುವುದನ್ನು ನನ್ನಿಂದ ನೋಡಲಾಗದು...ನೀನು ನನಗೆ ಕೊಡಬೇಕಾದ ಪ್ರೀತಿಯನ್ನು ನಾನು ಉದರದಲ್ಲಿದ್ದಾಗಲೆ ಅನುಭವಿಸಿದ್ದೇನೆ..ನನಗೂ ನಿನ್ನನ್ನು ಬಿಟ್ಟು ಹೋಗುವ ಇಚ್ಛೆ ಇರಲ್ಲಿಲ್ಲ..ದೇವರು ನನ್ನ ಮುಂದೆ ಮೂರು ಆಯ್ಕೆ ಇಟ್ಟಿದ್ದರು..ಒಂದು ಉದರದಲಿರುವಾಗ ಸಾಯುವುದು ಇನ್ನೊಂದು 18 ವರುಷ ತುಂಬಿದ ಹೊತ್ತಿನಲ್ಲಿ ಸಾಯುವುದು ಮತ್ತೊಂದು ತಂದೆ ತಾಯಿಯ ಪ್ರೀತಿ ಕಾಣದೆ ಬದುಕುವುದು...ಪ್ರೀತಿ ಕಾಣದೆ ಬದುಕುವುದಕ್ಕಿಂತ ಸಾಯುವುದು ಒಳಿತು ಅನಿಸಿತು..18ವರುಷ ಇದ್ದು ನಂತರ ಸತ್ತರೆ ನಿನ್ನ ನೋವು ಇನ್ನೂ ಜಾಸ್ತಿಯಾಗಬಹುದು ಎನಿಸಿತು..ಹಾಗಾಗಿ ಉಳಿದಿದ್ದು 8 ತಿಂಗಳು ಪ್ರೀತಿ ಅನುಭವಿಸಿ ಸಾಯುವುದು.ಹೋದ ಜನ್ಮದ ಕರ್ಮಕ್ಕೆ ನಾನು ನೀನು ಇಬ್ಬರೂ ಅನುಭವಿಸಬೇಕಾದುದು ವಿಧಿಯ ನಿಯಮ..8 ತಿಂಗಳು ಉದರದಿ ಇಟ್ಟುಕೊಂಡ 8 ಜನುಮಕ್ಕೆ ಆಗುವಷ್ಟು ಪ್ರೀತಿ ಕೊಟ್ಟಿದ್ದೀಯ.. ಇನ್ನೊಮ್ಮೆ ಜನಿಸುವ ಅವಕಾಶವಿದ್ದರೆ ನಿನ್ನೇ ಕೊಡುವಂತೆ ಕೇಳಿದ್ದೇನೆ..ಬೇಗ ಸುಧಾರಿಸಿಕೋ ಅಮ್ಮ..ನಾನು ಮತ್ತೆ ಹುಟ್ಟಿ ಬರುವೆ..ಎಲ್ಲೆಡೆ ಮೌನ ...ಭಯದಿಂದ ಎದ್ದಳು... ಸುತ್ತ ಮುತ್ತ ನೋಡಿದಳು... ಕೇಳಿಸಿಕೊಂಡ ಮಾತು ಕನಸು ಎಂಬುದು ಸ್ಪಷ್ಟವಾಯಿತು... ಮತ್ತೆ ಹುಟ್ಟಿ ಬರುವೆ ಎಂದು ಹೇಳಿದ್ದು ಮನದಲ್ಲಿ ಅಚ್ಚಳಿಯದೆ ಉಳಿಯಿತು...ಆ ದಿನಕ್ಕಾಗಿ ಮೆಲ್ಲನೇ ಚೇತರಿಸಿಕೊಳ್ಳುತ್ತಾ ಕಾಯಲಾರಂಭಿಸಿದಳು..

       ಇದಾಗಿ 4 ವರುಷ ಕಳೆಯಿತು.. ಮತ್ತೆ ಅದೇ ತಾರೀಕು ಅದೇ ಗಳಿಗೆ ಎದುರಾಯಿತು..ಆದರೆ ಉದರದಿ ಒಂದಲ್ಲ ಎರಡು ಜೀವಗಳಿದ್ದವು..ಈ ಬಾರಿ ಮೊದಲಿನಂತೆ ಆಗದಿರಲು ಕಾಣದ ದೇವರಿಗೆ ಮೊರೆಯಿಟ್ಟಳು.. ಬಿಟ್ಟುಹೋದ ಮಗುವಿನ ಮಾತು ನೆನಪಾಯಿತು.ಮತ್ತೆ ಹುಟ್ಟಿ ಬರುವೆ ಎಂದಿರುವೆ ಕಂದಾ ಬಿಟ್ಟು ಹೋಗಬೇಡ ಎಂದು ಬೇಡಿಕೊಂಡಳು.. ಆಪರೇಷನ್ ಗೆ ರೆಡಿ ಮಾಡುವುದು ಕಾಣಿಸಿತು.. ಸುತ್ತಲೂ ಮಂಪರಾಯಿತು..ಒಂದು ದಿನದ ನಂತರ ಎಚ್ಚರವಾದಾಗ ಸುತ್ತ ಮುತ್ತ ಹುಡುಕಾಡಿದಳು ಎಲ್ಲಿಯೂ ಮಗುವಿನ ಸುಳಿವು ಕಾಣಲ್ಲಿಲ್ಲ..ಈ ಬಾರಿಯೂ ಮೋಸ ಮಾಡಿದನೆಂದು ದೇವರನ್ನು ನೆನೆದು ಕೋಪಿಸಿಕೊಂಡು ಬೈಯಲು ತಾಯಾರಾದವಳಿಗೆ ಮಕ್ಕಳ ಅಳು ಕೇಳಿಸಿತು..ಬಾಗಿಲ ಕಡೆಗೆ ನೋಡಿದಳು ಅಮ್ಮ ಮತ್ತು ಪತಿ ಮಕ್ಕಳೊಂದಿಗೆ ಬರುವುದನ್ನು ನೋಡಿದಳು..ಖುಷಿಗೆ ಎದೆ ಭಾರವಾಯ್ತು..ಮಲಗಿದಲ್ಲೇ ಮಕ್ಕಳನ್ನು ನೋಡಿ ತಲೆ ಸವರಿದಳು..ಮತ್ತೆ ನಿದ್ದೆಯ ಮಂಪರಿಗೆ ಜಾರಿದಳು..

ಅಮ್ಮ...!ನಾನು ಹೇಳಿದಂತೆ ಬಂದಿರುವೆ.. ನಿಶ್ಚಿಂತೆ ಇಂದ ಇರು..ದೇವರು ಕಟುಕನಲ್ಲ...ಎಂದಂತೆ ಭಾಸವಾಯಿತು...ಕಂಬನಿ ಕರಗಿ ಆನಂದಭಾಷ್ಪ ಹರಿಯಿತು.... ನೆಮ್ಮದಿಯ ನಿಟ್ಟುಸಿರು ದಬ್ಬಿ ನಿದ್ರಿಸಿದಳು....


ಕರ್ಮದ ಫಲ ಎಲ್ಲರಿಗೂ ದೊರೆಯುವುದು

ಭರವಸೆಯ ಬೆಳಕು ಹರಿಯದೆ ಇರದು....



Rate this content
Log in

Similar kannada story from Abstract