Ashritha Kiran ✍️ಆಕೆ

Abstract Classics Others

4.0  

Ashritha Kiran ✍️ಆಕೆ

Abstract Classics Others

ನಿನ್ನೇ ಪ್ರೀತಿಸುವೆ -5

ನಿನ್ನೇ ಪ್ರೀತಿಸುವೆ -5

1 min
181


  

ಪತ್ರ ಓದಿದವಳು ಭಾವುಕವಾದಳು. ಪತ್ರ ಹಿಡಿದು ಸಮುದ್ರದ ದಡಕ್ಕೆ ತೆರಳಿದಳು... ದೂರದಲ್ಲಿ ಕುಳಿತು ನನಗಾಗಿ ಕಾಯುತ್ತಿದ್ದವನನ್ನು ಎಲ್ಲಿಯೋ ನೋಡಿದ್ದೇನೆ ಎಂಬ ಭಾವ ಕಾಡಲಾರಂಭಿಸಿತು.. ಹತ್ತಿರ ಹೋಗಿ ನೋಡಿದವಳಿಗೆ ಅಪ್ಪ ಪರಿಚಯಿಸಿದ್ದ ಪುಸ್ತಕದ ಅಂಗಡಿಯಲ್ಲಿ ಪ್ರತಿ ಬಾರಿ ಹತ್ತು ಹದಿನೈದು ಪುಸ್ತಕಗಳನ್ನು ಕೊಳ್ಳುವ ಮೂಲಕ ನನ್ನ ಗಮನ ಸೆಳೆದವ ಈತನೇ ಅಲ್ಲವೇ ??ಜೊತೆಗೆ ಅಪ್ಪ ಸಾಯುವ ದಿನ ಆಸ್ಪತ್ರೆಗೆ ಕರೆದೊಯ್ಯಲು ಸಹಾಯ ಮಾಡಿದ್ದು ಈತನೇ ಎಂಬ ನೆನಪಾಯಿತು..ಗಂಟೆಗಳ ಕಾಲ ಇಬ್ಬರು ಒಟ್ಟಿಗೆ ಕೂತು ಮಾತನಾಡಿದರು ತಮ್ಮ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು ಇಬ್ಬರ ಮನಸ್ಸು ಹಗುರವಾಯಿತು. ಮೃಣಾಲಿನಿ ಮನದ ಭಾರವನ್ನೆಲ್ಲ ಹೊರಹಾಕಿ ನಿಟ್ಟಿಸಿರು ಬಿಟ್ಟಳು... ಸೂರ್ಯ ತನ್ನ ಕೆಲಸ ಮುಗಿಸಿ ಹೊರಡುವ ಸಮಯವಾಗಿತ್ತು. ಆಗಸದಲ್ಲಿ ತಾರೆ ಮಿನುಗುತ್ತಿತ್ತು... ಅಪ್ಪ ಅಮ್ಮ ಇಬ್ಬರು ನನ್ನನ್ನು ನೋಡುತ್ತಿದ್ದಾರೆ ಎಂಬ ಭಾವನೆ ಮೂಡಿತು... ಕಂಬನಿ ಧಾರಾಕಾರವಾಗಿ ಹರಿಯುತ್ತಿತ್ತು.. ಮೋಹನನ ಕೈ ಮೃಣಾಲಿನಿಯ ಕಂಬನಿಯನ್ನು ಒರೆಸಲು ಮುಂದಾಯಿತು.. ಮೊದಲ ಸ್ಪರ್ಶಕ್ಕೆ ಬೆಚ್ಚಿದಳು ಹುಡುಗಿ.. ಕೈ ಕೈ ಹಿಡಿದು ಜೊತೆಗೆ ಸಾಗುತ್ತಾ ಮನೆ ತಲುಪಿದರು.. ಮುಂದಿನದ್ದೆಲ್ಲವೂ ಮೃಣಾಲಿನಿಗೆ ಕನಸಿನಂತೆ ಕಂಡರು ಕಷ್ಟದ ದಿನಗಳು ಮಂಜಿನಂತೆ ಕರಗಿದ ಅನುಭವವಾಯಿತು..


     ಅಮ್ಮನ ಪ್ರೀತಿ ಕಾಣದವಳು ಅಪ್ಪನ ಪ್ರೀತಿಯಲ್ಲಿ ಬೆಳೆದಳು... ಅಪ್ಪ ಮನದ ಬೇಸರವನ್ನು ಕಳೆಯಲು ಪ್ರಕೃತಿಯನ್ನು ಪ್ರೀತಿಸಲು ಕಲಿಸಿದ್ದರು.. ಸದಾ ಜೊತೆಗಿದ್ದ ಆಕಾಶ ತಾರೆ ಸಮುದ್ರ ಅವಳ ನೋವಿನಲ್ಲಿ ಜೊತೆಯಾಗಿದ್ದವು .ಪ್ರತಿ ಬಾರಿ ಅವಳ ಸಂಕಷ್ಟಕ್ಕೆ ಪರಿಹಾರ ಸೂಚಿಸುವ ಮಾರ್ಗವಾಗಿದ್ದವು.. ಪುಸ್ತಕಗಳನ್ನು ಪ್ರೀತಿಸುವ ಮೂಲಕ ಪುಸ್ತಕ ಪ್ರೇಮಿಯೊಬ್ಬನ ಕೈಹಿಡಿಯುವಂತಾಯಿತು... ಒಂಟಿಯಾಗಿ ಬರುತ್ತಿದ್ದ ಇಬ್ಬರೂ ಜಂಟಿಯಾಗಿ ಸಮುದ್ರದ ದಂಡೆಗೆ ಬರಲಾರಂಬಿಸಿದರು... ಸಮುದ್ರದ ಮೇಲಿನ ಪ್ರೀತಿ ಇಬ್ಬರಿಗೂ ಕಡಿಮೆಯಾಗಲ್ಲಿಲ್ಲ.. ಬೇರೆ ಬೇರೆಯಾಗಿದ್ದ ಕಡಲ ಮೇಲಿನ ಪ್ರೀತಿ ಒಂದಾಗಿ ಬೆರೆತಂತಿತ್ತು.

     ಎಂದಿಗೂ ಎಂದೆಂದಿಗೂ 

       ನಿನ್ನೇ ಪ್ರೀತಿಸುವೆ....

     ಸದಾ ಪ್ರೀತಿಸುತ್ತಲಿರುವೆ..

     ಎಂಬಂತಿತ್ತು ಅವರಿಬ್ಬರ 

      ಕಡಲ ಮೇಲಿನ ಒಲವು...

   

      ನೀಡುವಳು ಮನಃಶಾಂತಿ

     ಮರಳ ದಂಡೆಯಲ್ಲಿ ಕುಳಿತರೆ 

     ಮರೆಸುವಳು ಇಹದ ಪರಿವ..

    ಮನಸಿನ ನೋವ... ಕಳಿಸುತ್ತಾ ತೆರೆ

    ತೋರಿದಂತಿರುತ್ತದೆ ನಿಷ್ಕಲ್ಮಶ ಪ್ರೀತಿ

        ಬೀಸುತ್ತಾ ತಂಗಾಳಿ

    ಸಾಂತ್ವಾನಿಸುವಳು ಅಪ್ಪುವಂತೆ

      ತೇಲಿ ಬರುವ ಅಲೆಗಳಲ್ಲಿ....

         

 ಮುಕ್ತಾಯ


Rate this content
Log in

Similar kannada story from Abstract