Rashmi R Kotian

Horror

3.8  

Rashmi R Kotian

Horror

ಮಗುವಿನ ದೆವ್ವ

ಮಗುವಿನ ದೆವ್ವ

1 min
1.3K


    ನನ್ನ ಅಣ್ಣ ನಂಗೆ ಹೇಳಿದ ಕಥೆಯಿದು . ನನ್ನ ಅಣ್ಣ ಹಾಗೂ ಅವನ ಸ್ನೇಹಿತರಿಗಾದ ಅನುಭವ. ನಮ್ಮೂರು ಉಡುಪಿಯ ಮಲ್ಪೆಯಾಚೆಯ ತೊಟ್ಟಂ ಎಂಬ ಗ್ರಾಮ. ಮಲ್ಪೆ ಬೀಚ್ ಎಲ್ಲರಿಗೂ ಗೊತ್ತೇ ಇರುತ್ತೆ . ಅಲ್ಲಿಂದ ಉತ್ತರಕ್ಕೆ ಸಾಗಿದರೆ ತೊಟ್ಟಂ ಬೀಚ್ ಸಿಗುತ್ತೆ. ತೊಟ್ಟಂ ಬೀಚಿನಲ್ಲಿ ಕಡಲತಡಿಯ ಬಿಳಿ ಮರಳು ಹಾಗೂ ಬೂದು ಮಣ್ಣು ಸೇರುವ ಜಾಗದಲ್ಲಿ ಬಹಳಷ್ಟು ಗಾಳಿಮರಗಳಿವೆ. ನಮ್ಮಜ್ಜಿ ಮನೆಯಿಂದ ಒಂದು 50 ಮೀಟರ್ ದೂರದಲ್ಲಿ ಈ ಗಾಲಿಮರಗಳ ಮಧ್ಯೆ ಸ್ವಲ್ಪ ಖಾಲಿ ಜಾಗ ಇದೆ. ಅಲ್ಲಿ 3 4 ತೆಂಗಿನ ಮರಗಳಿವೆ. ಅಲ್ಲಿ ಅಣ್ಣಂದಿರು ಕುರ್ಚಿಯೆಲ್ಲಾ ಇಟ್ಟಿದ್ದರು ಹಾಗೂ ಪ್ರತಿ ಸಂಜೆ ಅಲ್ಲಿ ಗಾಳಿ ಸವಿಯುತ್ತಾ ಹರಟೆ ಹೊಡೆಯಲು , ಎಣ್ಣೆ ಇದ್ದ ಸಮಯಕ್ಕೆ ಎಣ್ಣೆ ಹೊಡೆಯಲು ಆ ಜಾಗದಲ್ಲಿ ಸೇರುತ್ತಿದ್ದರು. ಆ ಜಾಗದ ಎಡಭಾಗದಲ್ಲಿ ಗಾಳಿಮರಗಳಿಗೆ ತಾಗಿ ಬಹಳಷ್ಟು ಹುಲ್ಲಿನ ಪೊದೆಗಳು ಬೆಳೆದಿದ್ದವು. ಅದೊಂದು ದಿನ ಬೆಳೆದಿರುವ ಪೊದೆಗಳ ತೆಗೆಯಲು ಆ ತೋಟದ ಮಾಲೀಕ ಕೆಲಸಗಾರರನ್ನು ಕರೆಸಿದ್ದ. ಅಂದು ತೋಟದ ಎಲ್ಲಾ ಪೊದೆಗಳನ್ನು ತೆಗೆಸಿದಾಗ ನಿಗೂಢ ಮಗುವೊಂದು ಪತ್ತೆಯಾಗಿತ್ತು. ಪೊದೆಗಳ ನಡುವೆ ಸತ್ತು ಬಿದ್ದಿತ್ತು. ಈ ಘಟನೆ ಎಲ್ಲರನ್ನು ಅಚ್ಚರಿ ಗೊಳಿಸಿತ್ತು. ನಂತರ ಆ ಮಗುವನ್ನು ಪೋಲಿಸರಿಗೆ ಒಪ್ಪಿಸಲಾಯಿತು. ಆದರೆ ಅದು ಯಾರ ಮಗುವೆಂದು ಗೊತ್ತಾಗಲಿಲ್ಲ.

     ಆದರೆ ಅದೊಂದು ರಾತ್ರಿ ನನ್ನ ಅಣ್ಣಂದಿರೆಲ್ಲಾ ಅದೇ ಗಾಳಿಮರಗಳ ನಡುವಿನ ಖಾಲಿ ಜಾಗದಲ್ಲಿ ಮಲಗಿದ್ದಾಗ ಅವರಿಗೆ ಮಗುವೊಂದು ಮಗುವಿನಂತೆಯೇ ಸದ್ದು ಮಾಡುತ್ತಾ ( ಹ್ಹ್ಮ್ ಹ್ಹ್ ಊಹುಂ ಹುಂ ಎಂಬಂತೆ ಸದ್ದು ಮಾಡುತ್ತಾ ) ಅತ್ತ ಇತ್ತ ತೇವಳುತ್ತಾ ಹೋಗುವಂತ ಅನುಭವವಾಗುತ್ತಿತ್ತಂತೆ. ಅವರು ಸಾಮಾನ್ಯವಾಗಿ ಎಷ್ಟೋ ರಾತ್ರಿಗಳು ಅಲ್ಲಿ ಮಲಗುತ್ತಿದ್ದರು ಆದರೆ ಆ ಸತ್ತ ಮಗು ದೊರಕಿದ ನಂತರ ತೇವಳುತ್ತಿದ್ದ ಮಗುವಿನ ಅನುಭವ ಪ್ರತಿ ರಾತ್ರಿ ಆಗುತ್ತಿದ್ದುದರಿಂದ ಅಲ್ಲಿಂದ ಭಯಭೀತರಾಗಿ ಮಲಗುವುದನ್ನು ನಿಲ್ಲಿಸಿದರಂತೆ. ಈ ಕಥೆ ನನಗೆ ಸಾಕಷ್ಟು ಭಯ ಹುಟ್ಟಿಸಿತ್ತು.



Rate this content
Log in

Similar kannada story from Horror