Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

#REAL HEROES

SEE WINNERS

Share with friends

ಭಾರತೀಯ ಸ್ವಾತಂತ್ರ್ಯ ದಿನವು ವರ್ತಮಾನವನ್ನು ಸಂಭ್ರಮಿಸುವ, ಗತಕಾಲದ ಕೆಚ್ಚೆದೆಯ ಹೋರಾಟಗಳನ್ನು ಗೌರವಿಸುವ ಮತ್ತು ಭವಿಷ್ಯವನ್ನು ರಕ್ಷಿಸುವ ಮಹತ್ತರ ದಿನವಾಗಿದೆ!


ನಮ್ಮ ನಾಡು ಕಂಡಿರುವ ದಬ್ಬಾಳಿಕೆ, ಹೋರಾಟಗಳತ್ತ ಒಮ್ಮೆ ಹಿಂತಿರುಗಿ ನೋಡಿ, ಗತಕಾಲದ ಬೃಹತ್ ಕದನಗಳನ್ನು ಮೆಲುಕು ಹಾಕುತ್ತಾ, ಸ್ವಾತಂತ್ರ್ಯ ಹೋರಾಟಗಾರರಿಗೆ ನಮನ ಸಲ್ಲಿಸಿ, ನಮ್ಮನ್ನು ಸ್ವತಂತ್ರರಾಗಿಸಲು ಕಾರಣರಾದ ದೇಶಭಕ್ತರ ತ್ಯಾಗ-ಬಲಿದಾನವನ್ನು ಸ್ಮರಿಸೋಣ.

ಹೋರಾಟ ಮತ್ತು ಗೆಲುವು ನಮಗೆ ಕಲಿಸಿದ್ದನ್ನು ನಾವು ಎಂದಿಗೂ ಮರೆಯಲು ಸಾಧ್ಯವಿಲ್ಲ - "ರಾತ್ರಿ ಎಷ್ಟೇ ಕತ್ತಲಾಗಿದ್ದರೂ, ಅದರ ಹಿಂದೆಯೇ ಮುಂಜಾನೆಯ ಬೆಳಕು ಬರುತ್ತದೆ."


ಸ್ವಾತಂತ್ರ್ಯ ಹೋರಾಟಗಾರರ ಕೊಡುಗೆಯನ್ನು ಸ್ಮರಿಸುವುದು ಮತ್ತು ಆಚರಿಸುವುದಲ್ಲದೇ, ದಿನನಿತ್ಯವೂ ನಮ್ಮ ದೇಶಕ್ಕಾಗಿ ಹೋರಾಡುವ ಇತರರ ಪ್ರಯತ್ನಗಳನ್ನು ನಾವು ಮರೆಯಬಾರದು. ಏಕೆಂದರೆ ನಾವು ಕ್ಷೇಮವಾಗಿ ಮತ್ತು ಸುರಕ್ಷಿತವಾಗಿರುವುದನ್ನು  ಖಚಿತಪಡಿಸಿಕೊಳ್ಳಲು, ಅವರು ತಮ್ಮ ಸ್ವಂತ ಕುಟುಂಬಗಳಿಂದ ದೂರವಿರುತ್ತಾರೆ.


ಕಳೆದ ಈ 75 ವರ್ಷಗಳಲ್ಲಿ ಕೋವಿಡ್ ಮತ್ತು ಅದರಂತಹ ಅನೇಕ ಕಷ್ಟಕರ ಸಂದರ್ಭಗಳಲ್ಲಿ ಪ್ರತಿದಿನ ಜೀವಗಳನ್ನು ಉಳಿಸಿದ ಹಲವಾರು ಧೈರ್ಯಶಾಲಿಗಳಿದ್ದಾರೆ. ಪ್ರಾಣಕ್ಕೆ ಹೆದರದೆ ಶೌರ್ಯವನ್ನು ಪ್ರದರ್ಶಿಸಿದವರಿದ್ದಾರೆ.

ಇದಲ್ಲದೆ, ಜನರ ಭಾವನೆಗಳಿಗೆ ಬೆಲೆಕೊಡುವ ಮತ್ತು ಇತರರಿಗೆ ಸಹಾಯ ಮಾಡಲು ಕೊನೆಯ ಹಂತದವರೆಗೂ ಹೋಗಿರುವ ಕೆಲವರು ಇದ್ದಾರೆ.


ಅಂತಹ ಜನರೆಲ್ಲರೂ ನಮ್ಮ ಪಾಲಿಗೆ ರಕ್ಷಕ ದೇವತೆಗಳಂತೆ ಹಾಗೂ ನಿಜವಾದ ಹೀರೋ ಆಗಿ ಬಹು ಎತ್ತರದಲ್ಲಿ ನಿಲ್ಲುತ್ತಾರೆ!


ಇದು ಅಂತಹ ನಾಯಕರನ್ನು ಕೊಂಡಾಡುವ ಸಮಯ. ಈ ಸಂಭ್ರಮವನ್ನಾಚರಿಸಲು ಭಾರತದ 75ನೇ ಸ್ವಾತಂತ್ರ್ಯ ದಿನಕ್ಕಿಂತಲೂ ಉತ್ತಮವಾದ ಸಂದರ್ಭ ಮತ್ತೊಂದಿಲ್ಲ !! ಇದು ದೇಶ ಮತ್ತು ಸಮುದಾಯದ ಮೇಲಿನ ಶೌರ್ಯ, ನಿಸ್ವಾರ್ಥತೆ, ಸಮರ್ಪಣೆ, ಉತ್ಸಾಹ ಮತ್ತು ಪ್ರೀತಿಯನ್ನು ಆಚರಿಸುವ ಸಂದರ್ಭವಾಗಿದೆ!!


ಲೈಬ್ರರಿಪ್ರೆನಿಯರ್ಸ್ ಆಫ್ ಇಂಡಿಯಾ LiPI ಇವರ ಸಹಯೋಗದೊಂದಿಗೆ ಸ್ಟೋರಿಮಿರರ್ - ,

ಪ್ರಸ್ತುತಪಡಿಸುತ್ತದೆ


"ರಿಯಲ್ ಹೀರೋಗಳು" - ಈ ಬರವಣಿಗೆ/ಆಡಿಯೋ ಸ್ಪರ್ಧೆಯು ನಿಮ್ಮನ್ನು ಕಥೆ ಅಥವಾ ಕವಿತೆಯನ್ನು ಬರೆಯಲು/ಹೇಳಲು ಆಹ್ವಾನಿಸುತ್ತದೆ. ಇದು ನಿಜ ಜೀವನದ ವೀರರನ್ನು, ನಾಯಕರನ್ನು ಅವರ ಶೌರ್ಯ ಮತ್ತು ಧೈರ್ಯಕ್ಕಾಗಿ ಗೌರವಿಸುತ್ತದೆ!!


ನೀವು ನಿಜವಾದ ಹೀರೋಗಳು ಎಂದು ಭಾವಿಸುವ ಒಬ್ಬರು ಅಥವಾ ಹೆಚ್ಚಿನ ವ್ಯಕ್ತಿಗಳಿಗೆ ನಿಮ್ಮ ಕಥೆ ಅಥವಾ ಕವಿತೆಯನ್ನು ಅರ್ಪಿಸಿ. ನಿಮ್ಮ ಕಥೆ/ಕವಿತೆಗಳು ಅವರನ್ನು ಕೊಂಡಾಡಲಿ!


ನಿಮಗೇನಾದರೂ ಅನೇಕ ವೀರರ, ನಾಯಕರ ಬಗ್ಗೆ ತಿಳಿದಿದ್ದರೆ, ನೀವು ಒಂದಕ್ಕಿಂತ ಹೆಚ್ಚು ಕಥೆಗಳು/ಕವಿತೆಗಳನ್ನು ಸಹ ಸಲ್ಲಿಸಬಹುದು!

ರಿಯಲ್ ಹೀರೋಗಳು ಯಾವುದೇ ಕ್ಷೇತ್ರ, ಹಿನ್ನಲೆಯುಳ್ಳವರಾಗಿರಬಹುದು.


ಕೆಲವು ಉದಾಹರಣೆಗಳು:


ಸ್ವಾತಂತ್ರ ಹೋರಾಟಗಾರರು

ಪೊಲೀಸ್ ಮ್ಯಾನ್‌ಗಳು

ಸೇನಾ ಪುರುಷರು/ಸಶಸ್ತ್ರ ಸೇವಾ ವಿಭಾಗದವರು

ಆರೋಗ್ಯ ಕಾರ್ಯಕರ್ತರು (ವೈದ್ಯರು, ದಾದಿಯರು, ಇತ್ಯಾದಿ)

ಶಿಕ್ಷಕರು

ಸಾಮಾಜಿಕ ಕಾರ್ಯಕರ್ತರು

ಅಗ್ನಿಶಾಮಕ ದಳದವರು

ಭದ್ರತಾ ಸಿಬ್ಬಂದಿ

ಪೈಲಟ್‌ಗಳು

ವಿಜ್ಞಾನಿಗಳು

ಗೃಹಿಣಿಯರು

ಜನ ಸಾಮಾನ್ಯರು

ಮತ್ತು ಇನ್ನೂ ಅನೇಕರು


ಗಮನ ವಹಿಸಬೇಕಾದ ಕೆಲವು ಮುಖ್ಯ ನಿಯಮಗಳು:


-ಸ್ಪರ್ಧಿಗಳು ಮೇಲೆ ತಿಳಿಸಲಾದ ಥೀಮ್‌ಗಳಿಗೆ ಮಾತ್ರವೇ ತಮ್ಮ ಸ್ವಂತ ಬರಹವನ್ನು ಸಲ್ಲಿಸಬೇಕು.


-ಈ ಸ್ಪರ್ಧೆಗೆ ಕೇವಲ ಕಥೆ ಅಥವಾ ಕವಿತೆಯನ್ನು ಮಾತ್ರವೇ ಸಲ್ಲಿಸಬೇಕು. ಯಾವುದೇ ಲೇಖನಗಳು/ಪ್ರಬಂಧಗಳು ಸ್ವೀಕಾರಾರ್ಹವಲ್ಲ.


-ಕಥೆ-ಕವಿತೆಗಳನ್ನು ಬರಹ ರೂಪದಲ್ಲಿ ಸಲ್ಲಿಸಬಹುದು ಅಥವಾ ಆಡಿಯೋ ರೆಕಾರ್ಡಿಂಗ್ ಮಾಡಬಹುದು.


- ಬರಹಗಳಿಗೆ ಯಾಆವುದೇ ಮಿತಿ ಇಲ್ಲ (ಸ್ಪರ್ಧಿಗಳು ಹೆಚ್ಚಿನ ಸಂಖ್ಯೆಯ ಹೀರೋ/ನಾಯಕರ ಬಗ್ಗೆ ಅನೇಕ ಬರಹಗಳನ್ನು ಸಲ್ಲಿಸಬಹುದು)


-ಒಂದೇ ಕುಟುಂಬದಿಂದ ಭಾಗವಹಿಸುವ ಎಲ್ಲಾ ಸದಸ್ಯರು ತಮ್ಮದೇ ಆದ ಪ್ರತ್ಯೇಕ ಖಾತೆಗಳನ್ನು ಬಳಸಬೇಕು - 6 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಗು ಪೋಷಕರೊಂದಿಗೆ ಭಾಗವಹಿಸುತ್ತಿದ್ದರೆ - ಮಗುವಿನ ಖಾತೆಯು ಬೇರೆಯಾಗಿರಬೇಕು. ದಯವಿಟ್ಟು ಗಮನಿಸಿ: ಎಲ್ಲ ಸದಸ್ಯರಿಗೂ ಒಂದೇ ಖಾತೆಯನ್ನು ಬಳಸಬೇಡಿ.


- ಪ್ರತಿ ಕಥೆ/ಕವಿತೆಗೆ ಯಾವುದೇ ಪದಗಳ ಮಿತಿಯಿಲ್ಲ.


- ಸ್ಪರ್ಧಿಸಲು ವಯಸ್ಸಿನ ಮಿತಿಯಿಲ್ಲ.


-ಸ್ಪರ್ಧಿಗಳು ವಿವಿಧ ವಿಭಾಗಗಳಿಗೆ (ಕಥೆ/ಕವನ) ನೋಂದಾಯಿಸಿಕೊಳ್ಳಬಹುದು. ಆದಾಗ್ಯೂ, ಪ್ರತಿಯೊಂದು ಸಲ್ಲಿಕೆಗಳು ಕಥೆ ಅಥವಾ ಕವಿತೆಯ ಒಂದೇ ವರ್ಗದ ಅಡಿಯಲ್ಲಿರಬೇಕು.


-ಕಥೆ/ಕವಿತೆಗಳನ್ನು ಆನ್‌ಲೈನ್ ಸ್ಪರ್ಧೆಯ ಲಿಂಕ್ ಮೂಲಕ ಮಾತ್ರ ಸಲ್ಲಿಸಬೇಕು.


-ಇಮೇಲ್ ಮೂಲಕ ಅಥವಾ ಹಾರ್ಡ್ ಕಾಪಿಯಾಗಿ ಅಥವಾ ಸ್ಪರ್ಧೆಯ ಲಿಂಕ್ ಅನ್ನು ಬಳಸದೆ ಮಾಡಿದ ಯಾವುದೇ ಸಲ್ಲಿಕೆಯು, ಈ ಸ್ಪರ್ಧೆಯ ಪ್ರವೇಶಕ್ಕೆ ಅರ್ಹವಾಗಿರುವುದಿಲ್ಲ.


- ಸ್ಪರ್ಧೆಯು ಎಲ್ಲರಿಗೂ ಮುಕ್ತವಾಗಿದೆ ಮತ್ತು ಭಾಗವಹಿಸುವಿಕೆಗೆ ಯಾವುದೇ ಶುಲ್ಕವಿಲ್ಲ.



ಸ್ಪರ್ಧೆಯ ವರ್ಗಗಳು:


ವರ್ಗ 1 - 12 ವರ್ಷಕ್ಕಿಂತ ಮೇಲ್ಪಟ್ಟವರು

ವರ್ಗ 2 - 12 ವರ್ಷಕ್ಕಿಂತ ಕಡಿಮೆ ವಯಸ್ಸಿನವರು


ವಿಭಾಗಗಳುಕಥೆ, ಕವಿತೆ, ಆಡಿಯೋ


ಭಾಷೆಗಳು: ಕನ್ನಡ, ಇಂಗ್ಲೀಷ್, ಹಿಂದಿ, ಮರಾಠಿ, ಗುಜರಾತಿ, ತಮಿಳು, ತೆಲುಗು, ಮಲಯಾಳಂ, ಒಡಿಯಾ ಮತ್ತು ಬೆಂಗಾಲಿ.


ಬಹುಮಾನಗಳು:

ಪ್ರತಿ ಭಾಷೆ ಮತ್ತು ವರ್ಗದಲ್ಲಿ ಅತ್ಯುತ್ತಮವಾಗಿ ಬರೆದ ಟಾಪ್ 20 ಕಥೆಗಳು ಮತ್ತು ಕವಿತೆಗಳು "ಜ್ಯೂರಿ ಚಾಯ್ಸ್ ಅವಾರ್ಡ್" ಅನ್ನು ಗೆಲ್ಲುತ್ತವೆ ಮತ್ತು ಅವುಗಳನ್ನು ಸ್ಟೋರಿಮಿರರ್‌ನ ಇಬುಕ್‌ನಲ್ಲಿ ಪ್ರಕಟಿಸಲಾಗುವುದು ಜೊತೆಗೆ ಪ್ರಶಂಸಾ ಪ್ರಮಾಣಪತ್ರವನ್ನು ನೀಡಲಾಗುವುದು. ಗೆಲ್ಲಲು ಪರಿಗಣಿಸಲಾಗುವ ಅಂಶಗಳೆಂದರೆ ನಮ್ಮ ಸಂಪಾದಕೀಯ ತಂಡದ ಸಂಪಾದಕೀಯ ಸ್ಕೋರ್ಗಳಾಗಿವೆ (ಎಡಿಟೋರಿಯಲ್ ಸ್ಕೋರ್).


-ಪ್ರತಿ ಭಾಷೆ ಮತ್ತು ವರ್ಗದಲ್ಲಿ ಹೆಚ್ಚು ಓದುಗರನ್ನು ಪಡೆದ (ಲೈಕ್ಸ್ ಮತ್ತು ಕಾಮೆಂಟ್‌ಗಳು) ಟಾಪ್ 10 ಬರಹಗಳು "ಜನಪ್ರಿಯ ಬರಹಗಾರ ಪ್ರಶಸ್ತಿ" (ಪಾಪ್ಯುಲರ್ ರೈಟರ್ ಅವಾರ್ಡ್) ಅನ್ನು ಗೆಲ್ಲುತ್ತವೆ ಮತ್ತು ಮೆಚ್ಚುಗೆ ಪ್ರಮಾಣಪತ್ರದೊಂದಿಗೆ ₹150/- ಮೌಲ್ಯದ ರಿಯಾಯಿತಿ ವೋಚರ್ ಅನ್ನು ಪಡೆಯುತ್ತವೆ.


-ಥೀಮ್‌ಗಳಿಗೆ 20 ಅಥವಾ ಅದಕ್ಕಿಂತ ಹೆಚ್ಚು ವಿಭಿನ್ನ ಕಥೆಗಳನ್ನು ಸಲ್ಲಿಸುವ ಪ್ರತಿ ಭಾಷೆ ಮತ್ತು ವರ್ಗದ ಸ್ಪರ್ಧಿಗಳು, ಸ್ಟೋರಿಮಿರರ್‌ನಿಂದ ಉಚಿತ ಭೌತಿಕ ಪುಸ್ತಕವನ್ನು ಗೆಲ್ಲುತ್ತಾರೆ. ಗಮನಿಸಿ, ಕನಿಷ್ಠ ಸರಾಸರಿ ಸಂಪಾದಕೀಯ ಸ್ಕೋರ್ 6 ಅನ್ನು ಪಡೆದಿರಬೇಕು.


-ಥೀಮ್‌ಗಳಿಗೆ 40 ಅಥವಾ ಅದಕ್ಕಿಂತ ಹೆಚ್ಚು ವಿಭಿನ್ನ ಕವಿತೆಗಳನ್ನು ಸಲ್ಲಿಸುವ ಪ್ರತಿ ಭಾಷೆ ಮತ್ತು ವರ್ಗದ ಸ್ಪರ್ಧಿಗಳು, ಸ್ಟೋರಿಮಿರರ್‌ನಿಂದ ಉಚಿತ ಭೌತಿಕ ಪುಸ್ತಕವನ್ನು ಗೆಲ್ಲುತ್ತಾರೆ. ಗಮನಿಸಿ, ಕನಿಷ್ಠ ಸರಾಸರಿ ಸಂಪಾದಕೀಯ ಸ್ಕೋರ್ 6 ಅನ್ನು ಪಡೆದಿರಬೇಕು.


-ಎಲ್ಲಾ ಭಾಷೆಗಳು ಮತ್ತು ವರ್ಗಗಳ ಟಾಪ್ 20 ಆಡಿಯೋ ರೆಕಾರ್ಡಿಂಗ್‌ಗಳನ್ನು ಒಟ್ಟುಗೂಡಿಸಿ ₹150/- ಮೌಲ್ಯದ ರಿಯಾಯಿತಿ ವೋಚರ್ ಜೊತೆಗೆ ಮೆಚ್ಚುಗೆ ಪ್ರಮಾಣಪತ್ರವನ್ನು ನೀಡಲಾಗುತ್ತದೆ.


-ಎಲ್ಲಾ ಸ್ಪರ್ಧಿಗಳು ಭಾಗವಹಿಸುವಿಕೆಯ ಪ್ರಮಾಣಪತ್ರವನ್ನು ಸ್ವೀಕರಿಸುತ್ತಾರೆ.


ಸಲ್ಲಿಕೆಯ ಅವಧಿ:


1 ಆಗಸ್ಟ್ 2022 ರಿಂದ 31 ಆಗಸ್ಟ್ 2022 ರವರೆಗೆ


ಬರಹಗಳನ್ನು ಸಲ್ಲಿಸುವ ಲಿಂಕ್:


ಫಲಿತಾಂಶ: ಅಕ್ಟೋಬರ್ 05, 2022


ಸಂಪರ್ಕಿಸಿ:

ಇಮೇಲ್neha@storymirror.com

ದೂರವಾಣಿ ಸಂಖ್ಯೆ: +91 9372458287 / 022-49240082

ವಾಟ್ಸಾಪ್: +91 84528 04735



Trending content
1 226