Ashu Desai

Romance Classics Others

4  

Ashu Desai

Romance Classics Others

3) ಈ ಜೀವ ನಿನಗಾಗಿ

3) ಈ ಜೀವ ನಿನಗಾಗಿ

5 mins
253


ಪಾರ್ಟಿ ಮುಗ್ಸಿ ಎಲ್ಲರನ್ನೂ ಬೀಳ್ಕೊಟ್ಟು ಇನ್ನೇನು ತಾವೂ ಹೊರಡಬೇಕು ಎನ್ನುವಷ್ಟರಲ್ಲಿ, ಕೃತಿ ಮೊಬೈಲ್ ರಿಂಗ್ ಆಯ್ತು. ರಿಸೀವ್ ಮಾಡಿದ ಕೂಡಲೇ, ಆ ಕಡೆಯಿಂದ 


ಹಾಯ್ ಸ್ವೀಟಿ, ಯು ಲುಕಿಂಗ್ ಗಾರ್ಜಿಯಸ್. ನಂದೇ ದೃಷ್ಟಿ ತಾಕುತ್ತೆ ಅನ್ಸುತ್ತೆ. ಪಾರ್ಟಿ ಹೇಗ್ ಆಯ್ತು? ಅದೆಷ್ಟು ಜನರ ದೃಷ್ಟಿ ನನ್ನ ಸ್ವೀಟಿ ಮೇಲೆ ಬಿದ್ದಿದೆಯೋ ಎಂದು ಸಣ್ಣಗೆ ಹೇಳಿದನು.


ಈಹ್ತೆ ಸಣ್ಣಗೆ ಹೇಳಿದರು ಅವನ ದನಿ ಅವಳಿಗೆ ಕೇಳಿಸಿತ್ತು. ಅವನ ಜಲಸಿ ನೋಡಿ ಅವಳಿಗೆ ನಗು ಬರುತ್ತಿತ್ತು. ಆದರೂ ನಗದೇ, ನಗು ತಡೆದುಕೊಂಡು ಮಾತನಾಡಿದಳು.


ಪಾರ್ಟಿ ಸೂಪರ್ ಆಗಿ ಆಯ್ತು ಹೀರೊ. ತುಂಬಾ ಜನ ಬ್ಯುಸಿನೆಸ್ ಫ್ರೆಂಡ್ಸ್ ಆದ್ರು. ನಮ್ ಮುಂದಿನ ಪ್ರೊಜೆಕ್ಟ್ ಗೆ ಹೆಲ್ಪ್ ಆಗುತ್ತೆ. ಮೆಹತಾ ಜೊತೆ ಡಿಸ್ಕಶನ್ ಮಾಡಿದ್ದೇನೆ. ಮುಂದಿನದ್ದೆಲ್ಲ ಅವರೇ ನೋಡ್ಕೋತಾರೆ. ಕನ್ಸ್ಟ್ರಕ್ಷನ್ ಕೆಲಸ ಮಿತ್ರ ಬಿಲ್ಡರ್ಸ್ ಅಂತಾ, ನಮ್ಮ ಹಾಗೆ ಕೆಲವು ಸಮಾಜಮುಖಿ ಕೆಲಸ ಮಾಡ್ತಾ ಬಂದಿದ್ದಾರೆ.


ಅವರ ಕಂಪನಿಗೆ ನಮ್ಮ ಹೊಸ ಪ್ರಾಜೆಕ್ಟ್ ಕೊಟ್ರೆ ಒಳ್ಳೇದು ಅನ್ನಿಸ್ತು. ಕೋಟೇಷನ್ ಸುಭ್ಮಿಟ್ ಮಾಡೋಕೆ ಹೇಳಿದೀನಿ. ನಿಂಗೂ ಫಾರ್ವರ್ಡ್ ಮಾಡ್ತೀನಿ. ನೀನೊಮ್ಮೆ ಚೆಕ್ ಮಾಡಿ ಫೈನಲ್ ಮಾಡು ಹ್ಯಾಂಡ್ಸಮ್ ಎಂದು ಒಂದೇ ಉಸಿರಿಗೆ ಹೇಳಿ ಮುಗಿಸಿದಳು. ಅವಳ ಕಾರ್ಯ ವೈಖರಿಯೆ ಅಂತದ್ದು. ಕೆಲಸ ಅಂತಾ ಬಂದ್ರೆ ಮುಗೀತು. ಬೇರೆ ಯಾವುದರ ಬಗ್ಗೆಯೂ ಆಲೋಚಿಸುತ್ತಿರಲಿಲ್ಲ.


ಹೊಸ ಪ್ರಾಜೆಕ್ಟ್ ಬಗ್ಗೆ ಅವಳ ಆಸಕ್ತಿ ಕಂಡು ಒಮ್ಮೆ ಮೆಲು ನಕ್ಕವನು, ವೇರಿ ಗುಡ್ ಸ್ವೀಟಿ ಎಂದು, ಡಿನ್ನರ್ ಆಯ್ತಾ ಎಂದು ಕಾಳಜಿಯಿಂದ ಕೇಳಿದ??


ಆಯ್ತು ಹ್ಯಾಂಡ್ಸಮ್. ನಿಂದಾಯ್ತಾ? ಎಂದು ಮರು ಪ್ರಶ್ನಿಸಿದಳು


ಹ್ಮ್ ಕಣ್ಣಿಗೆ ಆಯ್ತು. ಕಣ್ಣಿಗಿವತ್ತು ಮೃಷ್ಟಾನ್ನ ಭೋಜನ ಆಯ್ತು. ಇನ್ನು ಹೊಟ್ಟೆಗೆ ಮಾಡ್ಬೇಕು ಎಂದು ತುಂಟತನದಿಂದ ಅವಳ ಮುಖ ನೋಡುತ್ತಲೇ ಹೇಳಿದ.


ಅವನ ಮಾತಿನ ತಾತ್ಪರ್ಯ ಅರಿತವಳು, ಸುಮ್ಮನೆ ಒಂದು ಸ್ಮೈಲ್ ಮಾಡಿ, ಸರಿ ತುಂಬಾ ಲೇಟ್ ಆಯ್ತು. ಊಟ ಮಾಡಿ ಮಲಗಿ. ನಾವು ಹೋಟೆಲ್ ಹೋಗಬೇಕು. ನಾಳೆ ಕಾಲ್ ಮಾಡ್ತೀನಿ. ಪಪ್ಪಂಗು ನಾಳೆ ಮಾಡ್ತೀನಿ ಅಂತ ಹೇಳು. ಗುಡ್ ನೈಟ್. ಟೇಕ್ ಕೇರ್. ಬೈ ಎಂದು ಫೋನ್ ಇಡಲು ನೋಡಿದಳು.


ತಕ್ಷಣ ಹೇಯ್ ವೇಯ್ಟ್ ವೇಯ್ಟ್. ಇಷ್ಟು ನೈಟ್ ಎರೆಡು ಮುದ್ದಾಗಿರೋ ಗೊಂಬೆಗಳು ಬೆಂಗಳೂರಲ್ಲಿ ಓಡಾಡಿದರೆ ಹುಡುಗರ ಗತಿ ಏನು? ನಿವಿಬ್ರೆ ಹೋಗೋದು ಬೇಡ. ಹೊರಗೆ ನಿಮ್ ಕಾರ್ ಹತ್ರ ಒಬ್ರು ವೇಯ್ಟ್ ಮಾಡ್ತಾ ಇದಾರೆ. ಅವ್ರು ನಿಮ್ಮನ್ನ ಸೇಫ್ ಆಗಿ ನಿಮ್ ಡೆಸ್ಟಿನಿ ಮುಟ್ಟಿಸ್ತಾರೆ ಎಂದು ಹೇಳಿದ. ಅವನ ರೀತಿಯೇ ಹಾಗೆ, ಕ್ಷಣವೂ ಅವನ ಅನುಪಸ್ಥಿತಿ ಕಾಡದಷ್ಟು ಕಾಳಜಿ ಮಾಡುವನು. ಎಲ್ಲಿದ್ದರೇನು ನಮ್ಮವರ ಕಾಳಜಿ ಮಾಡಲು, ಜವಾಬ್ದಾರಿ ವಹಿಸಿಕೊಳ್ಳಲು. ಇವನದ್ದು ಅದೇ ಪರಿ.


ಅವನ ಕಾಳಜಿಗೆ ಮನಸ್ಸು ತುಂಬಿ ಬಂದರೂ, ದೂರ ಇದ್ದು ಕಾಳಜಿ ಮಾಡುವ ಅವನ ಪರಿಗೆ ಖುಷಿ ಪಟ್ಟಿದ್ದಳು. ಆದರೂ ಅವನೆಲ್ಲಾ ಕೆಲಸಗಳ ಮಧ್ಯೆಯು ಅವನು ಇವಳ ಜವಾಬ್ದಾರಿ ವಹಿಸಿಕೊಂಡು ಮಾಡುವುದು ಅವನಿಗೆ ಅವನಿಗೆ ತನ್ನಿಂದ ಹೊರೆಯಾಗಬಾರದು ಎಂದು ಅವಳ ಚಿಂತೆ. ಅವಳೆಷ್ಟೇ ನಿರಾಕರಿಸಿದರು ಅವನು ಕೇಳಲೊಲ್ಲ. ಹ್ಮ್ಮ್ ಓಕೆ ಹ್ಯಾಂಡ್ಸಮ್. ಬೇಡ ಅಂದ್ರೆ ನೀನು ಕೇಳಲ್ಲ. ಎಂದು ಹುಸಿ ಮುನಿಸಿನಿಂದಲೇ ಹೇಳಿದಳು. ಅವನ ಮೇಲೆ ಅವಳಿಗೆಂದು ಮುನಿಸಾಗದು. ಅದು ಅವನಿಗೂ ಗೊತ್ತಿರುವುದೇ.


ಸರಿ ಹೋಟೆಲ್ ಹೋದ ಮೇಲೆ ಕಾಲ್ ಮಾಡು. ಇವಾಗ ಕಾರ್ ಅಲ್ಲಿ ಆರಾಮಾಗಿ ನಿದ್ದೆ ಮಾಡ್ತಾ ರೆಸ್ಟ್ ಮಾಡಿ. ಸ್ವಲ್ಪ ರಿಲ್ಯಾಕ್ಸ್ ಆಗ್ತೀರಾ. ಎಲ್ಲಿ ನಿನ್ನ ಅಡಾಪ್ಟ್ ಸಿಸ್ಟರ್, ಸೇ ಥಾಂಕ್ಸ್ ಟು ಹರ್. ಬೈ ಎಂದು ಹೇಳಿ ಕರೆ ತುಂಡರಿಸಿದ.


ಓಕೆ ಬೈ ಎಂದಷ್ಟೇ ಹೇಳಿ ನೀತಾ ಜೊತೆ ಕಾರ್ ಕಡೆ ಹೊರಟಳು.


***********************


ಹ್ಯಾಂಡ್ಸಮ್ ಹೇಳಿದಂತೆ ಕಾರಲ್ಲಿ ಇಬ್ಬರೂ ಹುಡುಗಿಯರು ನಿದ್ದೆ ಮಾಡಿದ್ದರು. ಮ್ಯಾಮ್ ನಿಮ್ ಡೆಸ್ಟಿನಿ ಬಂತು ಎಂಬ ಡ್ರೈವರ್ ಮಾತಿಗೆ ಇಬ್ಬರಿಗೂ ಎಚ್ಚರ ಆಗಿತ್ತು.


ಕಣ್ ಬಿಟ್ಟು ನೋಡಿದ ಹುಡುಗಿಯರು ತಾವು ತಲುಪಿದ ಜಾಗ ನೋಡಿ ಇಬ್ಬರೂ ಒಂದು ಕ್ಷಣ ಬೆದರಿದ ಹರಿಣಿಯಾದರು. ಸುತ್ತ ಮತ್ತೊಮ್ಮೆ, ಮಗದೊಮ್ಮೆ ಕಣ್ಣಾಡಿಸಿ ಸ್ಥಳ ವೀಕ್ಷಣೆ ಮಾಡಿದರು.


***********


ಮ್ಯಾಮ್ ಹೋಗೋಣವೇ ಎಂದು ಮತ್ತೆ ಡ್ರೈವರ್ ಮಾತಾಡಿಸಿದಾಗ ವಾಸ್ತವಕ್ಕೆ ಬಂದ ನೀತಾ ಮತ್ತು ಕೃತಿ ಮುಖ ಮುಖ ನೋಡಿಕೊಂಡರು.


ನೀತಾ ಕೋಪವಂತು ಎಲ್ಲೆ ಮೀರಿತ್ತು. ಮನದಲ್ಲಿ ಎಷ್ಟೇ ಭಯ ಆಗಿದ್ದರು, ಅದನ್ನು ತೋರ್ಗೊಡದೇ, ಕೋಪದಿಂದ ಎಲ್ಲಿಗೆ ಹೋಗೋದು? ಇದು ನಾವು ಸ್ಟೇ ಆಗಿದ್ ಹೋಟೆಲ್ ಅಲ್ಲ. ನಮ್ಮನ್ನ ಎಲ್ಲಿಗೆ ಕರ್ಕೊಂಡು ಬಂದಿದೀಯ?? ಯಾರು ನೀನು?? ನಾವು ಯಾರು ಅಂತಾ ಗೊತ್ತಾ ನಿಂಗೆ? ನಮ್ಮ ಬಾಸ್ಗೆ ನಿನ್ನ ಈ ಕೆಲಸಡ ಬಗ್ಗೆ ಗೊತ್ತಾದ್ರೆ ನಿನ್ನನ್ನ ಅವರು ಕೊಂದೆ ಹಾಕ್ತಾರೆ ಹುಷಾರ್ ಎಂದು ಗಾಬರಿಯಲ್ಲಿ ಏನೇನೋ ಮಾತಾಡಿದಳು.


ನೀತಾ ಯಾಕ್ ಅಷ್ಟು ಟೆನ್ಶನ್ ಆಗ್ತಿಯ? ವಿಚಾರಿಸೋಣ ಇರು. ಒಂದು ನಿಮಿಷ ತಾಳ್ಮೆ ತಗೋ. ಈ ಹುಡುಗನನ್ನ ನಿಮ್ಮ ಬಾಸ್ ತಾನೆ ಹೈಯೆರ್ ಮಾಡಿರೋದು. ಮತ್ಯಾಕೆ ಅಷ್ಟು ಟೆನ್ಶನ್ ಆಗ್ತಾ ಇದ್ದೀಯ ಎಂದು ಸಮಾಧಾನ ಮಾಡಲು ಪ್ರಯತ್ನಿಸಿದಳು. ಆದರೂ ನೀತಾ ಕೋಪ ಹಾಗೂ ಭಯ ಎರೆಡೂ ಕಿಂಚಿತ್ತೂ ಕಡಿಮೆ ಆಗಿರಲಿಲ್ಲ.


ಅವರ ವಾದ ಕೇಳ್ತಾ ಇದ್ದ ಆ ವ್ಯಕ್ತಿ ಕಾರ್ ಇಂದ ಸ್ವಲ್ಪ ದೂರ ಹೋಗಿ ಯಾರಿಗೋ ಫೋನ್ ಮಾಡ್ತಾ ಇದ್ದ.


ಇತ್ತ ಕಾರ್ ಅಲ್ಲಿ


ಕೃತಿ ನಾವು ಎಲ್ಲಿಗೆ ಬಂದಿದೀವಿ. ಈ ಡ್ರೈವರ್ ನಮ್ಮನ್ನ ಎಲ್ಲಿಗೆ ಕರ್ಕೊಂಡ್ ಬಂದಿದ್ದಾನೆ? ನಾವು ಏನಾದ್ರೂ ಕಿಡ್ನಾಪ್ ಆಗಿದೀವಾ?? ಸರ್ಗೆ ಫೋನ್ ಮಾಡು. ನಂಗೆ ಯಾಕೋ ಭಯ ಆಗ್ತಾ ಇದೆ. ಅವ್ನು ಯಾರಿಗೋ ಫೋನ್ ಮಾಡಿ ಮಾತಾಡ್ತಾ ಇದಾನೆ. ಏನೇ ಇದೆಲ್ಲ? ಎಂದು ನೀತಾ ಒಂದೇ ಸಮನೆ ತಡಬಡಾಯಿಸಿದಳು.


ನೀತಾ ಮಾತು ಕೇಳಿ ಈ ಸಾರಿ ಕೃತಿಗೂ ಕ್ಷಣ ಅಂಜಿಕೆ ಆದಂತೆ ಆಯಿತು. ತಾವೇನಾದರೂ ಟ್ರ್ಯಾಪ್ ಆಗಿದೀವ ಎಂದು ಆಲೋಚಿಸಿದಳು. ಸುಮ್ನಿರು ನೀತಾ ನಂಗೂ ಭಯ ಪಡಿಸಬೇಡ. ನಂಗೆ ನಿಮ್ ಸರ್ ಮೇಲೆ ನಂಬಿಕೆ ಇದೆ ಎಂದು ನೀತಾಗೆ ಗದರಿಸಿದಳು.


ಅಷ್ಟರಲ್ಲಿ ಅವರನ್ನು ಕರೆತಂದ ವ್ಯಕ್ತಿ

ಮ್ಯಾಮ್ ಸರ್ ಲೈನ್ ಅಲ್ಲಿ ಇದಾರೆ. ನಿಮ್ಮ ಜೊತೆ ಮಾತಾಡ್ಬೇಕಂತೆ ಅಂತ ಕೃತಿ ಕೈಗೆ ಮೊಬೈಲ್ ಕೊಟ್ಟು ತಾನು ದೂರ ಸರಿದು ನಿಂತ.


ಯಾವ ಸರ್ ಎಂದು ಅನುಮಾನಿಸುತ್ತಲೇ ಆ ವ್ಯಕ್ತಿ ಕೈಯಿಂದ ಮೊಬೈಲ್ ಪಡೆದ ಕೃತಿ ಸ್ಪೀಕರ್ ಆನ್ ಮಾಡಿ ನೀತಾಗೆ ಕೇಳಿಸ್ಕೊ ಅಂತಾ ಸನ್ನೆ ಮಾಡಿ ಹಲೋ ಎಂದಳು.


ಆ ಕಡೆ ಇಂದ ಅವಳ ದನಿಯಲ್ಲಿದ್ದ ಗಾಬರಿ ಗ್ರಹಿಸಿದ ವ್ಯಕ್ತಿಗೆ ತಪ್ಪಿತಸ್ತ ಭಾವ ಮೂಡಿತು. ಪಶ್ಚತ್ತಾಪದಿಂದ ಸಾರಿ ಸ್ವೀಟಿ. ನಿಂಗೆ ಏನೋ ಸರ್ಪ್ರೈಸ್ ಕೊಡೋಣ ಅಂತ, ನಿಂಗೆ ಏನು ಹೇಳದೇ ಇಷ್ಟೆಲ್ಲಾ ಅರೇಂಜ್ ಮಾಡಿದೆ ಅಷ್ಟೇ. ಬಟ್ ನೀನು ಇಷ್ಟು ಭಯ ಪಡ್ತಿಯ ಅಂದುಕೊಂಡಿರ್ಲಿಲ್ಲ. ಸಾರಿ ಡಿಯರ್ ಎಂದನು. ಅವನ ದನಿಯಲ್ಲಿ ಪಶ್ಚತ್ತಾಪ ಎದ್ದು ಕಾಣುತ್ತಿತ್ತು.


ಹೇಯ್ ಹ್ಯಾಂಡ್ಸಮ್, don't ಫೀಲ್ ಬ್ಯಾಡ. ನಾನು ನನ್ನ ನಂಬೋದಕ್ಕಿಂತ ಹೆಚ್ಚು ನಿನ್ನ ನಂಬ್ತೀನಿ. ನಂಗೇನು ಭಯ ಇಲ್ಲ. ಈ ನೀತಾನೆ ಓವರ್ ಆಗಿ ಆಡಿದ್ದು. ಎಂದು ನೀತಾ ಕಡೆಗೆ ಒಮ್ಮೆ ಗುರಾಯಿಸಿ ನೋಡಿದಳು.


ನೀತಾ ತಪ್ಪಿತಸ್ಥೆಯಂತೆ ತಲೆ ತಗ್ಗಿಸಿ ಕೂತಳು.


ಕೃತಿ ಮಾತು ಕೇಳಿ ಸಾಂತ್ವನ್ಗೆ ಸ್ವಲ್ಪ ಸಮಾಧಾನ ಆಯಿತು. ಥ್ಯಾಂಕ್ ಯು ಸ್ವೀಟಿ ಎಂದನು. ಸರಿ ಹಾಗಾದ್ರೆ ಆ ವ್ಯಕ್ತಿ ಕೈಗೆ ಮೊಬೈಲ್ ಕೊಟ್ಟು ಅವನ ಜೊತೆ ಹೋಗಿ. ನಾನು ಮತ್ತೆ ಫೋನ್ ಮಾಡ್ತೀನಿ ಎಂದು ಹೇಳಿ ಕರೆ ತುಂಡರಿಸಿದ.


ಓಕೆ ಬಾಬಾ ಬೈ. ಟೇಕ್ ಕೇರ್ ಆಫ್ ಯುವರ್ ಸೆಲ್ಫ್ ಆಲ್ಸೋ ಎಂದು ನಕ್ಕು ಕರೆ ತುಂಡರಿಸಿ, 

ರಿ ಮಿಸ್ಟರ್ ಎಂದು ಆ ವ್ಯಕ್ತಿಯನ್ನು ಕರೆದು, ಮೊಬೈಲ್ ಅವನ ಕೈಗೆ ಇಟ್ಟಳು.


ಏನಂತೆ ಕೃತಿ, ಸರ್ ಎನ್ ಹೇಳಿದ್ರು ಎಂದು ನೀತಾ ಉತ್ಸಾಹದಲ್ಲಿ ಕೇಳಿದಳು.


ಅವಳ ಮೇಲಿನ ಮುನಿಸು ಇನ್ನೂ ಕೃತಿಗೆ ಕಡಿಮೆ ಆಗಿರಲಿಲ್ಲ. ನೀತಾಳಿಂದಾಗಿ ತನ್ನ ಹ್ಯಾಂಡ್ಸಮ್ ಬೇಸರ ಮಾಡಿಕೊಳ್ಳುವಂತೆ ಆಯಿತು ಎಂದು ಕೋಪ ಮಾಡಿಕೊಂಡಿದ್ದಳು. ಏನೋ ಸರ್ಪ್ರೈಸ್ ಇದೆ ಅಂತೆ. ಸೋ ನಾವು ಆ ವ್ಯಕ್ತಿ ಜೊತೆ ಹೋಗ್ಬೇಕು ಅಂತಾ ಹೇಳಿದಳು.


ಕೃತಿ ಮಾತು ಕೇಳಿ ನೀತಾಗೆ ಖುಷಿಯಾಯಿತು. ಅವರಿಬ್ಬರ ಅನುಬಂಧ ಕಂಡು ಹೃದಯ ತುಂಬಿ ಬಂದಿತು ಅವಳಿಗೆ. ಆದರೂ ಅವಳನ್ನು ಕಾಡುವ ಆಸೆ ನೀತಾಗೆ. ಕೃತಿಯನ್ನು ಗೋಳು ಹೊಯ್ದು ಕೊಳ್ಳುವ ಸಣ್ಣ ಸಣ್ಣ ಅವಕಾಶವನ್ನು ಕೈ ಬಿಡಳು.


ಕರ್ಮ, ನಾವು ಬೆಂಗಳೂರಿಗೆ ಬಂದು ಇನ್ನು 2 ಡೇಸ್ ಆಗಿಲ್ಲ. ಆಗ್ಲೇ ಸರ್ ಗೆ ನಿನ್ನ ಬಿಟ್ಟು ಇರೋಕೆ ಆಗ್ತಾ ಇಲ್ಲ. ಅಲ್ಲಿ ಕೆಲ್ಸ ಎಲ್ಲಾ ಬಿಟ್ಟು ಇಲ್ಲಿ ನಿಂಗೆ ಸರ್ಪ್ರೈಸ್ ಪ್ಲಾನ್ ಮಾಡ್ತಾ ಕೂತಿದಾರೋ ಏನೋ. ಮುಂಬೈ ಕಂಪನಿ ಗತಿ..... ಎನ್ನುತ್ತಾ ನಾಟಕೀಯವಾಗಿ ತಲೆ ಮೇಲೆ ಕೈ ಹೊತ್ತಳು.


ಮತ್ತೆ ಮಾತು ಶುರು ಮಾಡಿ, ಕೃತಿ ಸುಮ್ನೆ ಸರ್ಗೆ ಬೆಂಗಳೂರ್ ಬರೋಕೆ ಹೇಳಿಬಿಡು. ನಿನ್ ಜೊತೇನೆ ಇರಲಿ. ಸ್ವಾಮಿ ಕಾರ್ಯ ಸ್ವ ಕಾರ್ಯ ಎರೆಡು ಆಗುತ್ತೆ. ಬೇಕಿದ್ರೆ ನಾನು ಮುಂಬೈ ಹೋಗಿ ಅಲ್ಲಿ ವರ್ಕ್ ಅಪ್ಡೇಟ್ ಮಾಡ್ತೀನಿ. ನಿಮ್ಮಿಬ್ಬರಿಗೂ ತೊಂದರೆ ಮಾಡಲ್ಲ ಅಂತ ಮುಸಿ ಮುಸಿ ನಕ್ಕಳು


ಅವಳ ಮಾತು ಕೇಳಿ ಮೌನವಾದ ಕೃತಿನ ನೋಡಿ ನೀತಾಗೆ ಬೇಸರ ಆಯ್ತು. ಸಾರಿ ಕೃತಿ ನಿನ್ನ ಕಾಡ್ಸೋಕೆ ಅಂತ ಹೋಗಿ ನಿನ್ನ ಅತೀ ವಯಕ್ತಿಕ ವಿಚಾರ ಕೆದಕಿದೆ. ಕ್ಷಮಿಸು ಎಂದು ಮನಸಾರೆ ಕ್ಷಮೆ ಕೇಳಿದಳು. 


ಪರ್ವಾಗಿಲ್ಲ ಬಿಡು. ನಡಿ ಹೋಗೋಣ ಎಂದು ಹೊರಟರು.


*************************


ಮುಂದೆ ಬಂದ ಆ ವ್ಯಕ್ತಿ ಒಂದು ಪ್ರೈವೇಟ್ ಪ್ಲಾಟ್ ಎದಿರು ನಿಂತು ಬಾಗಿಲು ತೆಗೆದು, ಮ್ಯಾಮ್ ತಗೋಳಿ ಫ್ಲಾಟ್ ಕೀ. ನೀವು ಹೋಗಿ ಫ್ರೆಷ್ ಆಗಿ ಬನ್ನಿ. ಸರ್ ನಿಮ್ಗೆ ಕಾಲ್ ಮಾಡ್ತಾರೆ ಅಂತೆ. ನಾನಿನ್ನು ಹೊರಡ್ತೀನಿ. ಇಲ್ಲೇ ಕಾರಲ್ಲಿ ಮಲಗಿರ್ತೀನಿ. ಏನಾದ್ರೂ ಇದ್ರೆ ಒಂದು ಕಾಲ್ ಮಾಡಿ. ವಿಥಿನ್ 5 ಮಿನಿಟ್ಸ್ ನಿಮ್ಮ ಮುಂದೆ ಇರ್ತೀನಿ ಎಂದು ಹುಮ್ಮಸ್ಸಿನಿಂದ ಹೇಳಿದನು.


ಅವನ ಕೈಯಿಂದ ಕೀ ತೆಗೆದುಕೊಂಡ ಕೃತಿ ನೋಡಿ ಮಿಸ್ಟರ್ ಅಲ್ಲ, ಸಂಕಲ್ಪ. ನನ್ನ ಹೆಸರು ಸಂಕಲ್ಪ್. ಆದ್ರೆ ಎಲ್ರೂ ಕಲ್ಪ ಅಂತ ಕರೀತಾರೆ. ನೀವು ಹೇಗಾದ್ರು ಕರೀಬಹುದು ಎಂದನು.


ಆ ಹೆಸರು ಕೇಳಿದವಳ ಕಣ್ಣಲ್ಲಿ ಹನಿ ನೀರು ಜಿನುಗಿತು. ಅವಳ ಮಸ್ತಿಕದಲ್ಲಿ ಅವಳ ಆಪ್ತರೊಬ್ಬರು ಸುಳಿದು ಮರೆಯಾದರು. ಮತ್ತೆ ವಾಸ್ತವಕ್ಕೆ ಬಂದವಳು ಸರಿ ಎಂಬಂತೆ ತಲೆ ಆಡಿಸಿ, ಮಿಸ್ಟರ್ ಕಲ್ಪ ನಾವು ಸ್ಟೇ ಆಗಿದ್ದು ಹೋಟೆಲ್ ಆಕಾಂಕ್ಷಾ ದಲ್ಲಿ. ನಮ್ ಲಗ್ಗೇಜ್ ಎಲ್ಲಾ ಅಲ್ಲೇ ಇದೆ. ಸೋ ಮೊದಲು.. ಎಂದು ಏನನ್ನೋ ಹೇಳುವವಳಿದ್ದಳು.


ಅವಳ ಮಾತನ್ನು ಅರ್ಧಕ್ಕೆ ತಡೆದ ಸಂಕಲ್ಪ್,


ಮ್ಯಾಮ್ ಒಳಗೆ ಎರೆಡು ರೂಮ್ ಇದೆ. ಒಂದು ನಿಮ್ಗೆ. ಮತ್ತೊಂದು ನಿಮ್ ಫ್ರೆಂಡ್ಗೆ. ನಿಮ್ ನಿಮ್ ಲಗ್ಗೇಜ್ ನಿಮ್ ರೂಮ್ ಅಲ್ಲೇ ಇವೆ. ಆಗ್ಲೇ ಎಲ್ಲಾ ವ್ಯವಸ್ಥೆಯು ಆಗಿದೆ. ಇನ್ನೂ ಏನಾದ್ರೂ ಬೇಕಿದ್ರೆ ಜಸ್ಟ್ ಕಾಲ್ ಮಿ ಎಂದು ಹೇಳಿ ಅಲ್ಲಿಂದ ಹೊರಟನು.


ಆಶ್ಚರ್ಯದಿಂದ ಹುಡುಗಿಯರು ಇಬ್ಬರೂ ಮುಖ ಮುಖ ನೋಡಿಕೊಂಡು ಸುಮ್ನೆ ಫ್ರೆಶ್ ಆಗಲು ಹೋದರು


*************************


ಕೃತಿ ಮತ್ತು ನೀತಾ ತಲುಪಿದ್ದು ಎಲ್ಲಿಗೆ? ತಾವು ತಲುಪಿದ ಜಾಗ ನೋಡಿ ಅವರು ಹೆದರಿದ್ದು ಯಾಕೆ? ಅಷ್ಟಕ್ಕೂ ಅವರನ್ನು ಹೊತ್ತು ತಂದ ಕಾರ್ ತಲುಪಿದ ಡೆಸ್ಟಿನಿ ಯಾವುದು? ಹಾಗೂ ಅವರನ್ನು ಕರೆ ತಂದವರು ಯಾರು?? ನೀತಾ ತಮಾಷೆ ಮಾಡಿದ್ದಕ್ಕೆ ಕೃತಿ ಮೌನವಾಗಿದ್ದು ಏಕೆ? ಸಾಂತ್ವನ್ ಮಾಡಿದ ಸರ್ಪ್ರೈಸ್ ಪ್ಲಾನ್ ಏನು? ಈ ಸಂಕಲ್ಪ್ ಯಾರು? ಆ ಹೆಸರು ಕೇಳಿದ ಕೂಡಲೇ ಕೃತಿ ಕಣ್ಣಲ್ಲಿ ನೀರು ಬಂದಿದ್ದು ಏಕೆ? ಕೃತಿಗೂ ಆ ಹೆಸರಿಗೂ ಇರುವ ನಂಟೇನು? ಕೃತಿ ನೆನಪಿನಲ್ಲಿ ಸುಳಿದ ಸಂಕಲ್ಪ್ ಹಾಗೂ ಈ ಸಂಕಲ್ಪ್ ಇಬ್ಬರೂ ಒಬ್ಬರೇನ?


ಮುಂದುವರೆಯುವುದು..


ದಯವಿಟ್ಟು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಹಂಚಿಕೊಳ್ಳಿ. ಏನಾದರೂ ತಪ್ಪಿದ್ದರೆ ತಿಳಿಸಿ. ತಿದ್ದಿಕೊಳ್ಳುವೆ. ಬರವಣಿಗೆಯಲ್ಲಿ ಅಂಬೆಗಾಲು ಇಡುತ್ತಿರುವ ಕೂಸು ನಾನು. ನಿಮ್ಮ ಪ್ರೋತ್ಸಾಹವೇ ನನಗೆ ಬರೆಯಲು ಚೈತನ್ಯ. ನಿಮ್ಮ ಅನಿಸಿಕೆ ಅಭಿಪ್ರಾಯಗಳ ನಿರೀಕ್ಷೆಯಲ್ಲಿ❤️


ಧನ್ಯವಾದಗಳು




Rate this content
Log in

Similar kannada story from Romance