Ashwini Desai

Romance Classics Others

4  

Ashwini Desai

Romance Classics Others

ಮೊದಲ ಕುಡಿ ನೋಟದ ಪ್ರೀತಿ

ಮೊದಲ ಕುಡಿ ನೋಟದ ಪ್ರೀತಿ

4 mins
290


ಡಿಸೆಂಬರ್ 16, ಮುಂಜಾನೆ ೬ ಗಂಟೆ, ಆಗಷ್ಟೇ ಬೆಳಕು ಮೂಡಿತ್ತು. ಡಿಸೆಂಬರ್ ಚಳಿ ಅಂದ್ರೆ ಮನೆ ಬಿಟ್ಟು ಹೊರಗೆ ಹೋಗೋಕೆ ಭಯ ಪಡಿಸೋ ಚಳಿ. ಸಂಪೂರ್ಣ ನಗರ ನಿದ್ರೆಯ ಮಂಪರಿನಲ್ಲಿ ಇರುವಾಗ ಸಂಭ್ರಮ ಅನ್ವಿತಾಳ ಸಮಾಧಿಯ ಬಳಿ ಅಳುತ್ತ ಕುಳಿತಿದ್ದಾನೆ. ಇಡೀ ಸ್ಮಶಾನದಲ್ಲಿ ಸಂಭ್ರಮ ನಾ ಹೊರತುಪಡಿಸಿ ಇನ್ನೊಂದು ಜೀವ ಇರಲಿಲ್ಲ. ಅವನ ಜೀವಕ್ಕೆ ಜೀವವಾಗಿದ್ದ ಹೃದಯ ಹಾಯಾಗಿ ಸಮಾಧಿಯಲ್ಲಿ ಮಲಗಿತ್ತು. ಒಂದೇ ಸಮನೆ ತನ್ನ ಬೆರಳುಗಳನ್ನು ಸಮಾಧಿಯ ಮೆಲಾಡಿಸುತ್ತ, ಅವಳ ಹೆಸರನ್ನು ಮತ್ತೆ ಮತ್ತೆ ಓದುತ್ತ ಅಂದುಕೊಳ್ಳುತ್ತಾನೆ “ಅನ್ವಿತಾ ಬದಲು ಅದರಲ್ಲಿ ನನ್ನ ಹೆಸರಿದ್ದರೆ?”

ಅಂದಿನಿಂದ ಸಂಭ್ರಮ ಗೆ ಅದುವೇ ದಿನಚರಿಯಾಗಿತ್ತು. ಅಂದಿನಿಂದ ಅವನ ಹೆಸರಲ್ಲಿದ್ದ ಸಂಭ್ರಮ ಅವನ ಬದುಕಲ್ಲಿ ಉಳಿಲಿಲ್ಲ. ಪ್ರತಿದಿನ ಬೆಳಗ್ಗೆ ಸ್ಮಶಾನಕ್ಕೆ ಬರೋದು, ಕಣ್ಣೀರು ಬತ್ತಿ ಹೋಗುವಷ್ಟುಅಳುವುದು. ಎಲ್ಲರ ಸಮಾಧಿಗಳು ಹೂಗಳಿಂದ ತುಂಬಿ ಪರಿಮಳ ಸೂಸುತ್ತಿದ್ದರೆ, ಅನ್ವಿತಾ ಳ ಸಮಾಧಿ ಪದಪುಂಜಗಲಿರುವ ಹಾಳೆಗಳಿಂದ ತುಂಬಿತ್ತು.. ಅದರಲ್ಲಿ ಒಂದು ಪತ್ರದಲ್ಲಿ ಹೀಗೆ ಬರೆದಿತ್ತು..

“ಪ್ರಿಯೆ ನಿನ್ನ ನಗುವಿನ ಕ್ಷಣಗಳನ್ನು ನನ್ನ ಹೃದಯದಲ್ಲಿ ಶೇಖರಿಸಿದ್ದೆ,

ಇಂದು ಎಲ್ಲ ಕಣ್ಣೀರಾಗಿ ಬರುತ್ತಿದೆ..

ಆ ಕಣ್ಣೀರಿನ ಹನಿಗಳಿಂದ ನನ್ನ ಪ್ರೀತಿ ಮತ್ತಷ್ಟು ಎತ್ತರಕ್ಕೆ ಬೆಳೆಯುತ್ತಿದೆ“

ಒಂದು ವರ್ಷದ ಹಿಂದಿನ ಕಥೆ. ಅದೊಂದು ದಿನ ಸಂಭ್ರಮ ಅನ್ವಿತಾಳನ್ನು ತನ್ನ ಮನೆಯ ಎದುರಿನ ಬಾಲ್ಕನಿಯಲ್ಲಿ ನೋಡಿದ್ದ. ಮುಂಗಾರಿನ ಸಮಯ.. ಚಿಟ ಪಟ ಹನಿಗಳಿಗೆ ಧರೆಯನ್ನು ಮುತ್ತಿಕ್ಕುವ ತವಕ.. ಸುಂದರವಾದ ಹುಡುಗಿ.. ಸಾಕ್ಷಾತ್ ದೇವತೆ ತರಹ ಕಂಗೊಳಿಸುತ್ತಿದ್ದಳು.. ಅವಳ ಆ ನಗು ಆತನ ಪ್ರಜ್ಞೆಯನ್ನೇ ಸವಾರಿ ಮಾಡುವಂತಿತ್ತು.. ಕಟ್ಟದೆ ಹಾಗೆಯೇ ಬಿಟ್ಟಿರುವ ಅವಳ ಕೂದಲು ಗಾಳಿಗೆ ಜೋಲಾಡುತ್ತ ಕಣ್ಣಿನ ಮೇಲಿಂದ ಬಿದ್ದಿತ್ತು.. ಆಕೆಯ ಕೈ ಮುಖದ ಮೇಲೆ ಓಡಾಡುತ್ತ ಆ ಕೂದಲನ್ನು ಎಡ ಕಿವಿಯ ಹಿಂದೆ ತಳ್ಳುತ್ತಿತ್ತು.. ಆಕೆಯ ಕಿವಿಗೆ ಹಾಕಿಕೊಂಡಿರುವ ಆ ಲೋಲಾಕು, ಹಣೆಯಲ್ಲಿರುವ ಸಣ್ಣಗಿನ ಬಿಂದಿ, ಸಂಪಿಗೆ ಹೂವಿನಂತೆ ಇರುವ ಮೂಗು, ಆ ಮುದ್ದು ವದನ ಆತನನ್ನು ಮಂತ್ರ ಮುಗ್ಧಗೊಳಿಸಿತ್ತು.. ಕಡು ನೀಲಿ ಬಣ್ಣದ ಜೀನ್ಸು, ಹಸಿರು ಬಣ್ಣದ ಟಾಪ್ ದರಿಸಿರುವ ಆಕೆಯಿಂದ ಒಂದು ಕ್ಷಣವೂ ಕಣ್ಣು ಕೀಳಲು ಸಂಭ್ರಮ ಗೆ ಸಾಧ್ಯವಾಗಲಿಲ್ಲ.. ಮೊದಲನೇ ನೋಟದಲ್ಲೇ ಅವನಿಗೆ ಪ್ರೀತಿಯ ಅಮಲು ಹತ್ತಿತ್ತು.. ತನ್ನ ಮನದನ್ನೆಯನ್ನು ನೋಡಿದ ಖುಷಿ.. ಕಿವಿಯಲ್ಲಿ ವೀಣೆ ಝೆಂಕರಿಸಿದ ಅನುಭವ.. ಮನೆಯೊಳಗೇ ಸೀದಾ ಹೋದವನೇ, ಕಪಾಟಿನಲ್ಲಿದ್ದ ತನ್ನ ಒಂದು ಕಾಲದ ಮಿತ್ರ ಟೈಪ್ ರೈಟರ್ ನ ನೋಡಿದ. ಧೂಳು ತುಂಬಿದ ಗೆಳೆಯನನ್ನು ಸ್ವಚ್ಚಗೊಳಿಸಿ, ಪ್ರಾರ್ಥನಾ ಸಮಯದಲ್ಲಿ ಧರ್ಮ ಗ್ರಂಥವನ್ನು ಎದುರು ಇಡುವಂತೆ, ಅದನ್ನು ತನ್ನ ಮುಂದಿಟ್ಟು ಬರೆಯಲು ಶುರುವಿಟ್ಟುಕೊಂಡ..

“I did not believe in angels before I saw you”

ನಿಲ್ಲಿಸಿದ.. ಕೈಗಳು ಸೆಟೆದುಕೊಂಡವು, ಬೆರಳುಗಳು ಬಿಗಿಯಾದವು, ಹೃದಯ ಭಾರವಾಯಿತು, ಮನಸ್ಸು ತೇಲಿದಂತ ಅನುಭವ.. ಆತನ ಹೃದಯದ ಬಡಿತ ಟೈಪ್ ರೈಟರ್ ನ ಥಕ್ ಥಕ್ ಶಬ್ದಕ್ಕೆ ತಾಳ ಹಾಕಿದ ಅನುಭವ.. ಹಾಗೋ ಹೇಗೊ ಅದೇ ಗುಂಗಿನಲ್ಲಿ ಬರೆಯತೊಡಗಿದ..

“Now that I have seen you, not only me, my heart will believe it too..”

ದಿನ ವಾರ ಮಾಸಗಳು ಉರುಳಿದವು. ಹಗಲೆನ್ನದೆ ರಾತ್ರಿಯೆನ್ನದೆ ಅವಳ ಬಗ್ಗೆಯೇ ಯೋಚಿಸತೊಡಗಿದ. ತನ್ನ ಅನುಭವಗಳಿಗೆ ಬರವಣಿಗೆಯ ರೂಪ ಕೊಡತೊಡಗಿದ. ಗಂಟೆಗಟ್ಟಲೆ ಅವಳ ಒಂದು ನೋಟಕ್ಕಾಗಿ ಕಾಯುತ್ತ ಕುಳಿತು ಕೊಳ್ಳುತ್ತಿದ್ದ. ಪ್ರತಿದಿನವೂ ಮನಸ್ಸಿನಲ್ಲಿ ಅನಿಸಿದ್ದನ್ನು, ಹೇಳಲು ಆಗದ್ದನ್ನು ಬರೆಯುತ್ತಲೇ ಇದ್ದ..

“I never felt like this before

I think I have fallen for you

Will you be my princess

I dream of nobody but you..”

ಪ್ರತಿ ದಿನ ಬರೆಯುತ್ತ ಬರೆಯುತ್ತ ಅವನ ಪ್ರೀತಿ ಹೆಚ್ಚುತ್ತ ಹೋಯಿತು.. ಆದರೆ ಅದೇಕೋ ಅವಳ ಜೊತೆ ಹೇಳಲು ಏನೋ ಒಂದು ತರದ ಅಳುಕು, ಭಯ, ಆತಂಕ ಎಲ್ಲಿ ನಕಾರಾತ್ಮಕ ಉತ್ತರ ಬರುವುದೋ ಎಂದು. ಹುಚ್ಚನಂತೆ ಪ್ರೀತಿಸುತ್ತಿದ್ದ. ಅದೊಂದು ದಿನ ನಿರ್ಧರಿಸಿಯೇ ಬಿಟ್ಟ. ಟೈಪ್ ರೈಟರ್ ನಲ್ಲಿ ಕಡೆಯ ಪದಗಳನ್ನು ಬರೆದ.

“Complete my world with your presence                                               

My eyes are waiting to see you

Hold my hands.. don’t let go

you are my world, I am proud to say that”

ಕೊನೆಗೂ ಮನಸ್ಸನ್ನು ಗಟ್ಟಿಗೊಳಿಸಿ, ವರ್ಷದಿಂದ ಮನಸ್ಸಲ್ಲಿ ಹುದುಗಿಸಿಟ್ಟಿದ್ದ ತನ್ನ ಭಾವನೆಗಳನ್ನು ಹಂಚಿಕೊಳ್ಳಲು ಸೀದಾ ಅವಳ ಮನೆಗೆ ಹೋಗಿ ಬಾಗಿಲು ಬಡಿದ. ಒಂದು ಮುದುಕಿ ಬಂದಳು.. ಅವಳ ಬಗ್ಗೆ ಈತ ಕೇಳಲು, ಆಕೆಯ ಉತ್ತರವನ್ನು ಕೇಳಿ ಆತನಿಗೆ ಬರಸಿಡಿಲು ಬಡಿದಂತಾಯಿತು, ಪ್ರಾಣ ಪಕ್ಷಿಯೆ ಹಾರಿ ಹೋದಂತಾಯಿತು..”Anvitha just passed away in an accident just two days ago”.ಕುಸಿದು ಬಿದ್ದ ಸಂಭ್ರಮ, ಏನೋ ಭಾರವಾದುದು ಆತನಿಗೆ ಹೃದಯದಲ್ಲಿ ಸಿಕ್ಕಿಹಾಕಿ ಕೊಂಡಂತೆ ಆಯಿತು.. ಒಂದು ಭಯಂಕರ ಪೆಟ್ಟು.. ಆತನ ಕಣ್ಣುಗಳು ಅಗಲವಾದವು.. ಏನೋ ತಣ್ಣನೆ ಭಾವ ಹರಿದಂತ ಅನುಭವ.. ಕೈಕಾಲುಗಳನ್ನು ಅಲುಗಾಡಿಸುವುದು ಕಷ್ಟವಾಯಿತು.. ಹೃದಯಬಡಿಯುವುದನ್ನು ನಿಲ್ಲಿಸಿ ವ್ಯಘ್ರವಾಗಿ ಓಡುವಂತೆ ಅನಿಸಿತು.. ಮಿದಿಳು ನಿಷ್ಕ್ರಿಯವಾಯಿತು.. ಆತನು ತನ್ನನಿಯಂತ್ರಣವನ್ನು ಕಳೆದು ಕೊಂಡನು.. “Its not true, not true…..” ಎಂದು ತಡಬಡಿಸುತ್ತಿತ್ತು ಘಾಸಿಗೊಂಡಿರುವ ಮನಸ್ಸು. ಆಗ ಆತನಿಗೆ ಮನಸ್ಸಿಗೆ ಬಂದಿದ್ದು ನಾನು ತಿರುಗಿ ನನ್ನಮನೆಗೆ ಹೋಗಬೇಕು, ಅಲ್ಲಿ ತನ್ನಗೆಳೆಯ ಇದ್ದಾನೆ, ಗೆಳೆಯನಿಗೆ ಏನೋ ಹೇಳಬೇಕು ಎಂಬುದು. ಅವನಲ್ಲಿ ಒಂದು ವಿಭಿನ್ನ ರೀತಿಯ ಶಾಂತಿ ತುಂಬಿತ್ತು. ಆತ ಅಳುತ್ತಿರಲಿಲ್ಲ. ಘಂಟೆಗಳ ನಂತರ ಆತ ತನ್ನ ಹಾಸಿಗೆಯ ಮೇಲೆ ಮಲಗಿದ.. ಚಾದರವನ್ನು ಹೊದ್ದುಕೊಂಡ.. ಅಲ್ಲಿಯೇ ಮುರುಟಿಕೊಂಡ.. ದೇವರನ್ನು ಶಪಿಸಿದ.. ಎಲ್ಲವು ನಂಬಲಾಗದ ಬೆಳವಣಿಗೆಗಳು.. ಆದರೆ ಮುಖಕ್ಕೆ ರಾಚುವಷ್ಟು ನಿಜ.. ಆತ ಅಳತೊಡಗಿದ.. ಕಣ್ಣೀರು ಇಂಗಿ ಹೋಗುವಷ್ಟು.. ಸಮಾಧಾನವಾಗಲಿಲ್ಲ.. ಬೊಬ್ಬಿಟ್ಟ.. ಟೈಪ್ ರೈಟರ್ ನ ಮುಂದೆ ಕುಳಿತ.. ಕಣ್ಣ ಹನಿಗಳೊಂದಿಗೆ ಬರೆಯತೊಡಗಿದ.

ಮುಂಜಾನೆ ೪ ಗಂಟೆ. ಆಕೆಯ ಸಮಾಧಿಯ ಕಡೆಗೆ ಹೆಜ್ಜೆ ಹಾಕಿದ. ಆತ ಆಕೆಯನ್ನು ಮೊದಲನೇ ಬಾರಿ ಕಂಡಾಗಲು ಮಳೆ ಸುರಿಯುತ್ತಿತ್ತು. ಈಗಲೂ ಮಳೆ ಸುರಿಯುತ್ತಿದೆ. ಒಂದು ವರ್ಷದಿಂದ ಆಕೆಯ ನೆನಪಿನಲ್ಲಿ ಬರೆದ ಪತ್ರಗಳನ್ನು ಸಮಾಧಿಯ ಮೇಲೆ ಎಸೆದ. ಅದರಲ್ಲಿ ತಡರಾತ್ರಿ ಬರೆದ ಪತ್ರವೊಂದರಲ್ಲಿ ಹೀಗಿತ್ತು..

“I wish I could tell you how much I love you,                                          

I wish I could tell you I want to be yours

I wish you took your last breath in my arms..”

ಮನೆ ಕಡೆಗೆ ಹೆಜ್ಜೆ ಹಾಕುತ್ತಿರುವಾಗ, ಓಡುತ್ತ ಬರುತ್ತಿದ್ದ ಒಂದು ಪುಟ್ಟ ಹುಡುಗಿ ಎಡವಿ ಈತನ ಕಾಲಿನ ಬುಡದಲ್ಲಿ ಬೀಳುತ್ತಾಳೆ. ಚಿಂತಾಕ್ರಾಂತಳಾದ ಆಕೆಯ ತಾಯಿ ಓಡೋಡಿ ಬರುತ್ತಲೇ.. ಆಕೆಯನ್ನು ಮೇಲಕ್ಕೆತ್ತಿದ ಈತ ಸ್ವೆಟರ್ ಮೇಲೆ ಮೆತ್ತಿರುವ ಮಣ್ಣನ್ನು ಒರೆಸುತ್ತಾ “ನಿನ್ನ ಹೆಸರೇನು ಪುಟ್ಟ?” ಎಂದು ಕೇಳುತ್ತಾನೆ.. ಆಕೆ ತನ್ನ ಕೂದಲನ್ನು ಕಿವಿಯಾಚೆಗಿನ ಹಿಂದಕ್ಕೆ(ಅನ್ವಿತಾ ಸರಿಸುತ್ತಿದ್ದ ಶೈಲಿಯಲ್ಲಿ ಸರಿಸಿ) ತನ್ನ ಮುದ್ದಾದ ದನಿಯಲ್ಲಿ ಉಲಿಯುತ್ತಾಳೆ.. “ನನ್ನ ಹೆಸರು ಅನ್ವಿತ” ಎಂದು. ಸ್ವಲ್ಪ ಹೊತ್ತು ಆತ ಅವಳನ್ನೇ ದಿಟ್ಟಿಸುತ್ತಾನೆ. ಅವಳ ತಾಯಿ ಸಂಭ್ರಮನ ಕಡೆಗೆ ನೋಡುತ್ತಲೇ. “ಅನ್ವಿತ- ಎಷ್ಟು ರಮ್ಯವಾದ ಹೆಸರು” ಆತ ಕಂದಮ್ಮನನ್ನೇ ನೋಡುತ್ತಾ ಹೇಳುತ್ತಾನೆ. ಆ ಬಳಿಕ ಮನೆಯತ್ತ ಹೆಜ್ಜೆ ಹಾಕುತ್ತಾನೆ!!!

ಎಲ್ಲ ಪ್ರೇಮಕಥೆಗಳು ಸಂಪೂರ್ಣವಾಗ ಬೇಕಾಗಿಲ್ಲ. ಕೆಲವು ಅಪೂರ್ಣವಾಗೇ ನಿಂತು ಬಿಡುತ್ತವೆ. ಅವುಗಳು ಅವುಗಳದೇ ರೀತಿಯಲ್ಲೇ ರಮ್ಯವಾಗಿರುತ್ತದೆ. ಸಂಭ್ರಮನ ಈ ನನ್ನ ಕಾಲ್ಪನಿಕ ಕಥೆಯನ್ನು ಕೇಳಿ ನಿಮಗೆ ಅನಿಸಿರಬಹುದು. ಕಾಲಾಂತರದಲ್ಲಿ ಮನುಷ್ಯರು ಬದಲಾಗಬಹುದು, ಆದರೆ ಪ್ರೀತಿ ಹಾಗಲ್ಲ, ನಿಜವಾದ ಪ್ರೇಮಿಗಳು ಹಾಗಲ್ಲ, ಪ್ರೇಮಕಥೆಗಳಿಗೆ ಎಂದೂ ಸಾವಿಲ್ಲ. ನನ್ನ ಈ ಪುಟ್ಟ ಪ್ರಯತ್ನದ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಿಳಿಸಿ.

“ಬಾಳೆಂಬ ಆಟದಿ ಚೆಂಡಂತೆ ಎಲ್ಲರು, ತನ್ನಾಸೆಯಂತೆ ಆಡೋನೆ ದೇವರು”



Rate this content
Log in

Similar kannada story from Romance