Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

shristi Jat

Action Crime Thriller

4.5  

shristi Jat

Action Crime Thriller

ನಿಗೂಢ

ನಿಗೂಢ

4 mins
366


ಮೋಹನ್ ಕಂಪನಿಗೆ ಬೆಳಿಗ್ಗೆ ಬೇಗನೆ ಹೋದನು. ಯಾಕೆಂದರೆ ನೆನ್ನೆಯ ಕೆಲಸ ಬಾಕಿ ಇತ್ತು. ಅವನ ಮ್ಯಾನೇಜರ್ ಅವನಿಗೆ ಒಂದು ಕೆಲಸ ಕೊಟ್ಟಿದ್ದರು ಅದನ್ನು ಎರಡು ದಿನದಲ್ಲಿ ಮುಗಿಸಿ ತನಗೆ ಕೋಡುವುದಾಗಿ ಹೇಳಿದ್ದರು. ಮೋಹನ್ ಆಫೀಸ್ನಲ್ಲಿ ತನ್ನ ಜಾಗಕ್ಕೆ ಬಂದು ಕುಳಿತು ಕೆಲಸ ಪ್ರಾರಂಭ ಮಾಡಿದನು ಅವನಿಗೆ ಒಂದು ಕರೆ ಬಂತು ಅದು ತನ್ನ ಸ್ನೇಹಿತ ರಾಜೇಂದ್ರನದಾಗಿತ್ತು. ಮೋಹನ್ ನ ಭೇಟಿಯಾಗಲು ಅವನ ಮನೆಗೆ ಬಂದಿದ್ದ, ಅವನು ಇರದ ಕಾರಣ ಕರೆ ಮಾಡಿದ್ದ ರಾಜೇಂದ್ರನು, ಮುಂಚೆ ಇದೆ ಕಂಪನಿಯಲ್ಲಿ ಕೆಲಸ ಮಾಡಿದ್ದ ಆದರೆ ಇವಾಗ ಬದಲಾಯಿಸಿದ್ದ ಮುಖ್ಯವಾದ ಕೆಲಸ ಇತ್ತು ಬೇಗ ಕಂಪನಿಗೆ ಬಂದಿರುವುದಾಗಿ ಮತ್ತು ರಾತ್ರಿ ಭೇಟಿಯಾಗುವೆ ಎಂದು ಹೇಳಿದ.

ಸ್ವಲ್ಪ ಸಮಯದ ನಂತರ ಮುಖ ತೊಳೆಯಲು ವಾಶ್ ರೂಮ್ ಗೆ ಹೋದ ಮುಖ ತೊಳೆದುಕೊಂಡು ಬರುವಾಗ ಮೂಲೆಯಲ್ಲಿ ಯಾರೊ ಕುಳಿತಿರುವ ಹಾಗೆ ಕಂಡಿತು. ಹತ್ತಿರ ಬಂದು ನೋಡಿದಾಗ ಅದು ಒಂದು ಶವ. ಗಾಬರಿಗೊಂಡ ಮೋಹನ್ ಅಲ್ಲಿಂದ ಹೋರಗೆ ಬಂದು ಪೋಲಿಸ್ ರಿಗೆ ಕರೆ ಮಾಡಿದ ಮತ್ತು ತನ್ನ ಮ್ಯಾನೆಜರ್ ಗೂ ಕರೆ ಮಾಡಿ ವಿಷಯ ತಿಳಿಸಿದ.

ಹೋರಗಡೆ ಬಂದು ಸೆಕ್ಯೂರಿಟಿ ಗಾರ್ಡನನ್ನು ಕೇಳಿದ ಹೇಗೆ ಆಯಿತು ಈ ಕೊಲೆ ನೀನು ಯಾರಿಗಾದರೂ ಒಳಗೆ ಬಿಟ್ಟಿದಿಯಾ ಅಂತ ಕೇಳಿದ ಮೋಹನ್ ಅದಕ್ಕೆ ಗಾರ್ಡ್, ಇಲ್ಲ ಯಾರನ್ನು ಬಿಟ್ಟಿಲ್ಲ ರಾತ್ರಿಯದು ನನಗೆ ಗೋತ್ತಿಲ್ಲ. ಆದರೆ ಬೆಳಿಗ್ಗೆಯಿಂದ ನಿಮ್ಮನ್ನು ಬಿಟ್ಟು ಬೇರೆ ಯಾರು ಬಂದಿಲ್ಲ.


ಅಷ್ಟರೋಳಗಡೆ ಪೋಲಿಸ್ ರು ಬಂದರು ತನಿಖೆ ಶುರು ಮಾಡಿದರು.


ಸಿಸಿ ಟಿವಿ ಕ್ಯಾಮೆರಾದ ರೆಕಾರ್ಡಿಂಗ್ ಎಲ್ಲವನ್ನೂ ನೋಡಿದರು. ಒಬ್ಬರನ್ನು ಬಿಡದೆ ಕಂಪನಿಯಲ್ಲಿ ಕೆಲಸ ಮಾಡುವವರೆಲ್ಲರನ್ನು ಕರೆ ಮಾಡಿ ತನಿಖೆ ನಡೆಸತೋಡಗಿದರು.

ಕಂಪನಿಯ ಮ್ಯಾನೆಜರ್ ಸಹ ಬಂದನು ಎಲ್ಲರ ಮುಖ ಗೊಂದಲಕ್ಕಿಡಾಯಿತು. ಎಲ್ಲರ ಮುಖದಲ್ಲಿ ಪ್ರಶ್ನೆಯ ಚಿಹ್ನೆಯೇ ತೋರಿಸುತ್ತಿತ್ತು. ಕೊಲೆ ಮಾಡಿದವರು ಯಾರು ಅಂತ ಸುಳಿವು ಕೂಡ ಸಿಗಲಿಲ್ಲ. ಆದರೆ ತನಿಖೆ ಮುಂದುವರಿದಿತ್ತು. 

ಅಜಯ್ ಮೋಹನ್ ನ ಆಪ್ತಮಿತ್ರ ಅವನ ಹತ್ತಿರ ಬಂದು ಹೇಗೆ ಸಾಧ್ಯ ನೆನ್ನೆ ಟೀಮ್ ವರ್ಕ್ ಮಾಡಿ ಮಧ್ಯಾಹ್ನದವರೆಗೆ ನಮ್ಮ ಜೊತೆನೆ ಇದ್ದ ಮ್ಯಾನೇಜರ್ ಅವನಿಗೆ ಕೆಲಸದ ಮೇಲೆ ಎಲ್ಲಿಗೋ ಕಳಿಸಿದ್ರು ಆಮೇಲೆ ಮತ್ತೆ ಎಷ್ಟ ಗಂಟೆಗೆ ಆಫೀಸ ಗೆ ಬಂದ ಅಂತ ಗೋತ್ತಿಲ್ಲ ನನ್ ಕೆಲಸ ಆದಮೇಲೆ ಮನೆಗೆ ಹೋದೆ .

ಮೋಹನ್, ಹೌದು ನಾನು ಅಷ್ಟು ಗಮನ ಕೊಟ್ಟಿಲ್ಲ ಪ್ರೊಜೆಕ್ಟ್ ನ ಅವಧಿ ಮುಗಿಯಲು ಬಂದಿದೆಯೆಂದು ನನಗೆ ಬೇರೆ ಕೆಲಸ ವಹಿಸಿದ್ದಾರೆ ನಾನು ಅದರಲ್ಲಿ ನಿರತನಾಗಿದ್ದೇನೆ.


ಶೇಷಾಂಕ ನಿನ್ನೆ ಊರಿಗೆ ಹೋದ. ಮ್ಯಾನೆಜರ್ ಅವನಿಗೆ ಹೆಚ್ಚಿನ ಕೆಲಸ ಕೊಟ್ಟಿದ್ದರು. ಕೊನೆಗೆ ಹೋಗಿದ್ದು ಅವನೋಬ್ಬನೆ. ಅವನಿಗೆನಾದರು ಇದರ ಬಗ್ಗೆ ಗೋತ್ತಿರಬಹುದಾ ಕರೆ ಮಾಡಿ ಬರುವುದಾಗಿ ಅಜಯ್ ಮೋಹನ್ ಗೆ ಹೇಳಿದ ಮೋಹನ್ ಹೂಂ ಸರಿ ಮಾಡೊಣ 

ಆದರೆ ಅವನಿಗೂ ಇದರ ಬಗ್ಗೆ ಏನು ಗೋತ್ತಿಲ್ಲ ಹಾಗೂ ಯಾರ ಮೇಲೆ ಅನುಮಾನವು ಇಲ್ಲ ಎಂದು ಹೇಳಿದ.

 ರಾತ್ರಿ ಆಯ್ತು ಚಿಂತನೆಯಲ್ಲಿದ್ದ ಮೋಹನ್ ತನ್ನ ಗೆಳೆಯ ರಾಜೇಂದ್ರನಿಗೆ ಕರೆ ಮಾಡಿದ ಭೇಟಿಯಾಗಲು ಕರೆದನು ಮನೆ ಬೇಡ ಹೋರಗಡೆ ಬರುವುದಾಗಿ ರಾಜೇಂದ್ರ ಹೇಳಿದ ಸರಿ ಎಂದು ಒಂದು ಜಾಗ ಆಯ್ಕೆ ಮಾಡಿಕೊಂಡರು ಭೇಟಿಯಾಗಲು.


ಇತ್ತ ಅಜಯ್ ಮ್ಯಾನೇಜರ್ ಮನೆಗೆ ಹೋಗಿದ್ದ ಮ್ಯಾನೇಜರ್ ನೋಂದಿಗಿನ ಅವನ ಬಂಧ ಚೆನ್ನಾಗಿತ್ತು. ಕೆಲಸದ ಜೊತೆ ರಮೇಶ್ ನ ಸಾವಿನ ಬಗ್ಗೆ ಚರ್ಚೆ ಮಾಡಲು ಹೋಗಿದ್ದ 

ಅಜಯ್ ಮತ್ತು ರಮೇಶ್ ಇಬ್ಬರು ಮ್ಯಾನೇಜರ್ ಗೆ ತುಂಬಾ ಆತ್ಮೀಯವಾಗಿದ್ದರು ಅಜಯ್ ಗಿಂತ ಒಂದು ಪಟ್ಟು ರಮೇಶ್ ನ ಮೇಲೆ ಜಾಸ್ತಿ ಒಲುಮೆ ಇತ್ತು ಮ್ಯಾನೇಜರ್ ಗೆ. ಬೆಳಿಗ್ಗೆ ವಿಷಯ ತಿಳಿದ ನಂತರ ಕಂಗಾಲಾಗಿದ್ದರು.


ಮೋಹನ್ ಮತ್ತು ರಾಜೇಂದ್ರ ಒಂದು ಗಾರ್ಡನ್ ನಲ್ಲಿ ಕುಳಿತರು. ಬೆಳಿಗ್ಗೆ ನಡೆದ ಘಟನೆ ಬಗ್ಗೆ ರಾಜೇಂದ್ರನಿಗೆ ತಿಳಿಸಿದ ವಿಷಯ ತಿಳಿದ ರಾಜೇಂದ್ರನಿಗೆ ಶಾಕ್ ಆಯ್ತು. ಹೇಗೆ ನನಗೆ ಇವಾಗ ತಿಳಿಸುತ್ತಿರುವೆಯಾ ಆ ಕಂಪನಿಯಲ್ಲಿರುವಾಗ ನನಗೆ ಆಪ್ತನಾಗಿದ್ದ ಹೇಗಾಯ್ತು ಎಂದು ಕೇಳಿದ


ಮೋಹನ್ ನನಗೂ ಗೋತ್ತಿಲ್ಲ. ತನಿಖೆ ನಡಿತಿದೆ ರಾಜೇಂದ್ರ. ‌ಸರಿ ಬೆಳಿಗ್ಗೆ ನಾನು ನಿಮ್ಮ ಕಂಪನಿಗೆ ಬರುವೆ ಇದರ ಕುರಿತಾಗಿ ಮ್ಯಾನೇಜರ್ ಹತ್ತಿರ ಮಾತಾಡಿ ಎಲ್ಲರನ್ನೂ ಭೇಟಿಯಾಗುವೆ.


ಹೀಗೆ ಸ್ವಲ್ಪ ಸಮಯ ಮಾತುಕತೆ ನಡೆದವು 


ಮತ್ತೆ ಹೇಗಿದೆ ನಿನ್ ಹೋಸ ಕಂಪನಿ ಮೊದಲೆ ಜಾಣ. ಸಂಭಳ ಅಲ್ಲಿ ಹೆಚ್ಚು ಕೋಡುತ್ತಿರಬೇಕು! ವ್ಯಂಗ್ಯ ಮಾತಾಡಿ ಮೋಹನ್ ಮುಸುನಕ್ಕ.


ಅರ್ರೆ ಹಾಗೆನಿಲ್ಲಪ ಜಸ್ಟ್ ಫಾರ್ ಚೆಂಜ್ ಇರಲಿ ಅಂತ ಕಂಪನಿ ಬದಲಾಯಿಸಿದ್ದು ಅಷ್ಟೆ ಅಂತ ರಾಜೇಂದ್ರ ನಗ್ತಾಯಿದ್ದ ಹಾಸ್ಯದ ಮಾತುಗಳು ನಡೆದವು

ಮಾತಾಡುತ್ತಾ ಊಟ ಮುಗಿಸಿಕೊಂಡು ಮನೆಗೆ ಹೋದರು.

ಮರುದಿನ ಮೋಹನ್ ಕಂಪನಿಗೆ ಬಂದು ತಕ್ಷಣ ತಾನು ಮಾಡಿದ ಕೆಲಸವನ್ನು ಮ್ಯಾನೇಜರ್ ಕೈಗೆ ಒಪ್ಪಿಸಿದನು. ಖುಷಿಪಟ್ಟ ಮ್ಯಾನೇಜರ್ ರಮೇಶನ ವಿಷಯ ಒಂದು ಬಿಟ್ಟರೆ ನಿವೆಲ್ಲರು ಸರಿಯಾದ ಸಮಯಕ್ಕೆ ಕೆಲಸ ಮುಗಿಸಿದ್ದಿರಾ ಅದೊಂದು ಬೇಸರದ ಸಂಗತಿ ನನಗೆ ಎಂದನು.


ಮೋಹನ್ ಹೌದು ಸರ್. ಅಲ್ಲಾ ನಿಮಗೆ ಒಂದು ಮಾತು ಕೇಳಬಹುದಾ ಒಂದು ದಿನ ನಮ್ಮ ಕಂಪನಿಯಲ್ಲಿ ಯಾವುದೊ ವಿಷಯದ ಕುರಿತು ಜಗಳ ನಡೆದಿತ್ತು ಆವಾಗ ರಾಜೇಂದ್ರ ಕೂಡ ಇಲ್ಲೆ ಕೆಲಸ ಮಾಡುತಿದ್ದ ಅಜಯ್, ರಮೇಶ್, ದಿವ್ಯ, ರಾಜೇಂದ್ರ ಒಂದು ಮಿಟಿಂಗ್ ನಲ್ಲಿ ಕಿತ್ತಾಡುತಿದ್ದರು ಅದರ ಬಗ್ಗೆ ಸ್ವಲ್ಪ ಹೇಳ್ತಿರಾ.

 

ಮ್ಯಾನೇಜರ್ ಆವತ್ತು ವಿದೇಶದಲ್ಲಿ ಒಂದು ಮೀಟಿಂಗ್ ಇತ್ತು. ಆದ ಕಾರಣ ಯಾರನ್ನು ಕಳಿಸುವುದರ ಕುರಿತು ಜಗಳ. ಕೊನೆಗೆ ದಿವ್ಯಳನ್ನು ಕಳೆಸಿದ್ವಿ .

ಅಜಯ್ ತುಂಬಾ ಹಟಮಾರಿ ತನ್ನದೆ ಆಗಬೇಕು ಅಂತಾನೆ ಆವತ್ತು ರಾಜೇಂದ್ರನನ್ನು ಕಳುಹಿಸುವ ಉದ್ದೇಶವಿತ್ತು. ನನಗೆ ಆದರೆ ಅಜಯ್ ಗೆ ಅದು ಆಗಲಿಲ್ಲ ವಿವಾದ ನಡೆಯಿತು.

ಅಜಯ್ ಇಲ್ಲಿನ ಉದ್ಯೋಗಿ ಅಷ್ಟೆ ಅಲ್ಲ ನನ್ನ ದೂರದ ಸಂಭಂದಿಕನಾಗಬೇಕು. ಎಷ್ಟೋ ವರ್ಷಗಳಿಂದ ಇಲ್ಲಿ ಕೆಲಸ ಮಾಡುತ್ತಿದ್ದಾನೆ. ಹಾಗಾಗಿ ಅವನ ಮಾತು ಸ್ವಲ್ಪ ಕೇಳ್ತಿನಿ ಅಷ್ಟೆ. ಅವನಿಗೆ ರಮೇಶನ ಹೋಗಳಿದರೂ ಆಗುತ್ತಿರಲಿಲ್ಲ .


ರಮೇಶ ಒಳ್ಳೆಯ ಹುಡುಗ ಕೆಲಸ ನಿಷ್ಠೆಯಿಂದ ಮಾಡುತಿದ್ದ ಆದರೆ ಅಜಯ್ ಅವನಿಗೆ ತಪ್ಪು ದಾರಿಗೆ ಎಳೆಯುತ್ತಿದ್ದ.

ಮ್ಯಾನೇಜರ್ ರೂಮನಿಂದ ಹೋರಗೆ ಬಂದ ಮೋಹನ್. ಬಾಗಿಲು ಹೋರಗಡೆ ಅಜಯ್ ನಿಂತಿದ್ದ. ನಮ್ಮ ಮಾತನ್ನು ಕೇಳಿಸಿಕೊಂಡನೋ ಏನೊ ಸಂಶಯದಲ್ಲಿ ಮುಂದೆ ಹೋದ ಮೋಹನ್

ಮಧ್ಯಾಹ್ನ ಊಟ ಮುಗಿಸಿಕೊಂಡು ಕ್ಯಾಂಟಿನ್ ನಿಂದ ಹೋರಬಂದರು. ಮೋಹನ್ ಮತ್ತು ಅಜಯ್ ರಾಜೇಂದ್ರ ಬರುವುದನ್ನು ಕಂಡರು ಹೆ ಬಡಿಸ್ ವಾಟ್ಸಪ್ ಅಂದ ರಾಜೇಂದ್ರ, ನೈಸ್ ಕಣೊ ನೀನು ಅಂತ ಕೇಳಿದ ಅಜಯ್.


ಮಾತಾಡುತ್ತಾ ಆಫೀಸ್ ಒಳಗಡೆ ಹೋದರು.


ಅಜಯ್ ನಮ್ಮನ್ನೆಲ್ಲಾ ಮರ್ತಿದಿಯಪ್ಪಾ ಹೊಸ ಕಂಪನಿಗೆ ಹೋಗಿ. ರಾಜೇದ್ರ ಮರೆತಿದ್ರೆ ನಿಮ್ಮನ್ನ ಭೇಟಿಯಾಗಲು ಇಲ್ಲಿ ಬರ್ತಿರ್ಲಿಲ್ಲ ಕಣ್ರಪಾ, ಎಲ್ಲಾದರು ಟ್ರಿಪ್ ಮಾಡ್ರೊ ಹೋಗೋಣ ರಜೆಯಿದ್ದಾಗ.

 

ರಾಜೇಂದ್ರ ನಿಮ್ಮನ್ನ ನೋಡಿ ಮ್ಯಾನೇಜರ್ ಜೊತೆ ಸ್ವಲ್ಪ ಮಾತಾಡಿ ಹೋಗೋಣ ಅಂತ ಬಂದೆ. ಸರಿ ಅಂತ ತಮ್ಮ ಕೆಲಸ ಮಾಡಲು ಹೋದರು. ಅಜಯ್ ಮತ್ತು ಮೋಹನ್

ಸಂಜೆ ಆಯಿತು ಈ ಫೈಲ್ಸ್ ಇವತ್ತೆ ಕೋಡಲು ಹೇಳಿದ್ದಾರೆ ಮ್ಯಾನೇಜರ್. ಆದರೆ ಬೇಗನೆ ಆಫೀಸ್ ನಿಂದ ಹೋಗಿದ್ದಾರೆ ಏನು ಮಾಡೋದು ಅಜಯ್ ಮೋಹನ್ ನನ್ನು ಕೇಳಿದ. 

ಮೋಹನ್ ಕರೆ ಮಾಡಿ ಕೇಳು ಅಜಯ್ ಇದು ಸರಿನೆ ಅಂತ ಕರೆ ಮಾಡಿದ ಊಪ್ಸ್ ಮನೆಗೆ ತಂದು ಕೋಡಲು ಹೇಳುತ್ತಿದ್ದಾರೆ ಸರ್ 

ಮೋಹನ್ ಸರಿ ಕೊಟ್ಟು ಬಾ ಅದರಲ್ಲೆನು?


ಅಜಯ್ ಇವತ್ತಾದರೂ ಮನೆಗೆ ಬೇಗ ಹೋಗಲು ಯೋಚಿಸಿದ್ದೆ. ಅಷ್ಟರಲ್ಲಿ ಮೋಹನ್ ಗೆ ರಾಜೇಂದ್ರನ ಕರೆ ಬರುತ್ತೆ ಪಾರ್ಟಿ ಮಾಡೋದಾ ಇವತ್ತು, ರಾತ್ರಿ ರೆಡಿ ಇದ್ರೆ ಹೇಳು ಅಜಯ್ ಗೂ ಕರಿತಿನಿ.


ಮೋಹನ್ ಹೌದಾ ನಾನ್ ರೆಡಿ ಇದಿನಿ ಅಜಯ್ ನ ಕೇಳು ಇನ್ನು ಅವನದ್ದು ಕೆಲಸಾನೆ ಮುಗಿತಿಲ್ಲ


ರಾಜೇಂದ್ರ ಸರಿ ಅಂತ ಕರೆ ಕಟ್ ಮಾಡಿದ ಒಂದು ಗಂಟೆ ನಂತರ ಮೂರು ಜನ ಸೇರಿ ಪಾರ್ಟಿ ಮಾಡಿದರು.


ಬೆಳಿಗ್ಗೆ ಆಫಿನಿಂದ ಮೋಹನ್ ಗೆ ಕರೆ ಬಂದಿತ್ತು ಮ್ಯಾನೇಜರ್ ರವರ ಕೊಲೆಯಾಗಿದ್ದು ಭೂಮಿ ಕುಸಿದಂತಾಯಿತು ಮೋಹನ್ ಗೆ ಮತ್ತೆ ಎಲ್ಲಾರನ್ನು ಚಿಂತಜನಕರನ್ನಾಗಿಸಿತು. 


ಮತ್ತೆ ತನಿಖೆ ನಡೆಯಿತು. ಕೊನೆಗೆ ಮೋಹನ್ ಒಂದು ನಿರ್ಧಾರಕ್ಕೆ ಬಂದನು. ಪೋಲಿಸರ ಬಳಿ ಹೋಗಿ ರಮೇಶ್ ಮತ್ತು ಮ್ಯಾನೇಜರ್ ಕೊಲೆ ಮಾಡಿದ್ದು ಯಾರು ಅಂತ ನನಗೆ ಗೊತ್ತು ಅಂತ ಹೇಳಿದ ಬೇರೆ ಯಾರು ಅಲ್ಲ ನನ್ನ ಗೆಳೆಯ ರಾಜೇಂದ್ರ.


ಯಾಕೆಂದರೆ ರಮೇಶ್ ನ ಶವದ ಪಕ್ಕ ಅವನ ಪೆಂಡೆಂಟ್ ಇತ್ತು ಅವನು ನನ್ನನ್ನು ಭೇಟಿಯಾಗಲು ಬಂದಾಗ ಅವನ ಕುತ್ತಿಗೆಯಲ್ಲಿ ಚೈನ್ ಅಷ್ಟೇ ಇತ್ತು ಆದರೆ ನನಗೆ ಸ್ಪಷ್ಟತೆ ಇರಲಿಲ್ಲ ನಿನ್ನೆ ಪಾರ್ಟಿ ಮುಗಿಸಿಕೊಂಡು ರಾತ್ರಿ ತಡವಾಗಿತ್ತು. ನಶೇಲಿ ನನಗೆ ಮನೆಗೆ ಹೋಗಲು ಆಗುತ್ತಿರಲಿಲ್ಲ. ಆದ ಕಾರಣ ನಾನು ಅಜಯ್ ಮನೆಯಲ್ಲೆ ಮಲಗಿದ್ದೆ, ಆಗ ನಶೆಯಲ್ಲಿ ರಾಜೇಂದ್ರನಿಗೆ ಅಜಯ್ ನಿನ್ನೆ ಮೊನ್ನೆ ಬಂದು ವಿದೇಶಕ್ಕೆ ಹೋಗ್ತಾನಂತೆ ಅದಕ್ಕೆ ನಾನು ರಮೇಶ್ ಅವನಿಗೆ ಹೋಗ್ದಿರೊ ಹಾಗೆ ಮಾಡಿದ್ದು, ದಿವ್ಯಾಗೆ ಕಳಿಸಿದ್ದು ಅಂತ ಎಲ್ಲಾ ಹೇಳುತಿದ್ದ.

 

ಅದಲ್ಲದೆ ರಾಜೇಂದ್ರ ನಾನು ಬೇಗ ಬೆಳಿಬೇಕು, ನಮ್ ಮ್ಯಾನೇಜರ್ ಕಂಪನಿ ಟೈ ಅಪ್ ಗೆ ಒಪ್ಕೋಳ್ತಿಲ್ಲಾ ಅಂತ ನಮ್ ಮ್ಯಾನೇಜರ್ ಗೆ ಬೈತಿದ್ದ. ಅವನ ಎಲ್ಲಾ ನಿಗೂಢ ಒಂದೊಂದಾಗಿ ಹೋರಗೆ ಬರ್ತಿತ್ತು.

"ಕೋನೆಗೆ ಜ್ಞಾನ ಇದ್ದು ದುರಾಸೆಗೆ ಒಳಗಾದ, ಜೈಲು ಸೇರಿದ"


 

 


Rate this content
Log in

Similar kannada story from Action