Vaishnavi Puranik

Action Inspirational Children

4  

Vaishnavi Puranik

Action Inspirational Children

ಪಯಣ

ಪಯಣ

1 min
264


ಕಥಾ ವಸ್ತು : "ಹಳ್ಳಿಯಿಂದ ಪಟ್ಟಣಕ್ಕೆ ಬಂದ ಹುಡುಗಿ, ಹಳ್ಳಿಯಲ್ಲಿ ಕಿತ್ತು ತಿನ್ನುವ ಬಡತನ, ಸಂಸಾರದ ಜವಾಬ್ದಾರಿ ಹೊತ್ತು ಪಟ್ಟಣಕ್ಕೆ ಬಂದ ಹುಡುಗಿ".. 


ಕಥೆಯ ಶೀರ್ಷಿಕೆ - ಜ್ಞಾನಜ್ಯೋತಿ


 "ಹೆಣ್ಣು" ತಾನು ಈ ಭೂಮಿಗೆ ಜನನದಿಂದ ಹಿಡಿದು ತನ್ನ ಮರಣದ ವರೆಗೆ ಸಾಕಷ್ಟು ನೋವುಗಳನ್ನು ಅನುಭವಿಸುತ್ತಾಳೆ. ಹುಟ್ಟಿದಾಗ ಆಕೆಗೆ ಪಾಪ ಹೆಣ್ಣು ಎನ್ನುವ ಕಾರಣಕ್ಕಾಗಿ ತುಚ್ಚವಾಗಿ ಕಾಣುವ ಕುಟುಂಬ, ಮುಂದೆ ಹದ್ದಿನಂತೆ ಕಾಣುವ ಸಮಾಜದ ಕೆಟ್ಟ ದೃಷ್ಟಿ ಅದರ ಜೊತೆಯಲ್ಲಿ ಮುಂದೆ ಸಾಗುತ್ತಾ ತಾನು ಕಲಿಯುವ ಕ್ಷೇತ್ರದಲ್ಲೂ ಕಣ್ಣಿನ ಅಂಚಿನ ವಾತಾವರಣ, ತನ್ನ ತವರು ಮನೆಯಿಂದ ಗಂಡನ ಮನೆಗೆ ಹೋದಾಗ ಆಕೆಯನ್ನು ಪ್ರಾಣಿಯ ಹಾಗೆ ಕೆಲಸ ಮಾಡುವಂತೆ ಆಗುವುದು. ತನ್ನ ಜೀವನ ಅಂತ್ಯಕಾಲದಲ್ಲಿ ತನ್ನ ಪತಿಯ ಅಗಲುವಿಕೆಯ ನೋವು ಒಂದು ಆದರೆ ಮಕ್ಕಳು ತನ್ನ ಜೊತೆ ಇಲ್ಲದೇ ಜೀವನ ನಡೆಸುವುದನ್ನು ಕಾಣಬಹುದಾಗಿದೆ.


ಭಾಗ -1


ನೋಡಲು ಪುಟ್ಟ ಹಳ್ಳಿ.ಸುತ್ತಲೂ ಹಚ್ಚ ಹಸಿರು ಪ್ರದೇಶ.ತಮಗೆ ಜೀವ ಕೊಟ್ಟ ಗದ್ದೆ ಹೊಲದಲ್ಲಿ ಉಳುಮೆ ಮಾಡುತ್ತಾ ಇದ್ದರು.ಭೂಮಿ ತಾಯಿಯ ಮಕ್ಕಳಾದ ರೈತರು ಜೀವನ ಸಾಗಿಸುತ್ತಾ ಇದ್ದರು.ಇರುವ ತನಕವೂ ಜೀತದ ಆಳಾಗಿ ದುಡಿಸುವ ದೊಡ್ಡ ಮನೆತನವು ಬೇರುಬಿಟ್ಟಿತ್ತು.ದನ, ಕರುಗಳನ್ನು ಮನೆಯಲ್ಲಿ ಸಾಕಿಕೊಂಡು ತಾನು ದಿನನಿತ್ಯವೂ ಜಳಕ ಮಾಡಿಸಿ ಮನೆಯೊಡತಿಯರು ಅರಶಿಣ ಕುಂಕುಮ ಹಚ್ಚಿ ಭಕ್ತಿಯಿಂದ ನಮಸ್ಕಾರ ಮಾಡುತ್ತಾ ಇದ್ದರು.

  ಕಷ್ಟ ಬಂದಾಗ ದೈವವು ಕೈಯ ಹಿಡಿಯುತ್ತದೆ ಎನ್ನುವ ಯುಕ್ತಿಯಂತೆ ಗ್ರಾಮಗಳಲ್ಲಿ ಗ್ರಾಮದೇವತೆ ಅಮ್ಮನವರು ನೆಲೆಸಿದ್ದರು.ಕುಟುಂಬವೇ ನನ್ನ ಉಸಿರು ಗಂಡನೇ ನನ್ನ ಕಣ್ಣು ಎಂದು ನಂಬಿದ್ದ ಹೆಂಗಸರು ಇದ್ದರು.


ರಾಮಣ್ಣ ಮನೆಯ ಜವಾಬ್ದಾರಿ ಹೊತ್ತವರು. ಆತನ ಮುಖದಲ್ಲಿ ಕಷ್ಟಗಳು ಕಾಣುತ್ತಿತ್ತು.ರಾಮಣ್ಣ ಹಾಗೆಯೇ ದಣಿವು ಆರಿಸಿಕೊಳ್ಳಲು ಮನೆಯ ಬಳಿಗೆ ಹೋದಾಗ ಆ ಮನೆಯ ಸೌಭಾಗ್ಯ ದೇವತೆ ಎನಿಸಿದ ಗೌರಮ್ಮ ಹೆಜ್ಜೆಯ ಮೇಲೆ ಹೆಜ್ಜೆ ಇಡುತ್ತಾ ಬರುವಾಗ, ಈ ಮನೆಗೆ ಅದೃಷ್ಟ ದೇವತೆಯೇ ಕಾಲು ಇಡುವಂತೆ ಭಾಸವಾಯಿತು. ಗೌರಮ್ಮ ತನ್ನ ತವರು ಮನೆಯಿಂದ ತಂದ ತಂಬಿಗೆಯಲ್ಲಿ ನೀರು ತೆಗೆದುಕೊಂಡು ಬಂದು,ಸ್ವಾಮಿ ತೆಗೆದುಕೊಳ್ಳಿ ನೀರು ಎನ್ನುವಾಗ.....


(ಮುಂದುವರಿಯುತ್ತದೆ)...


Rate this content
Log in

Similar kannada story from Action