Sulochana C.M.

Action Classics Others

3  

Sulochana C.M.

Action Classics Others

ಹಾಲು ಮಾರಿದರೂ ಹಸನಾಗಿರಬಹುದು.

ಹಾಲು ಮಾರಿದರೂ ಹಸನಾಗಿರಬಹುದು.

2 mins
16


ನಮ್ಮನೆಗೆ ಹಾಲು ಕೊಳ್ಳುವ ಬಗ್ಗೆ ಚರ್ಚೆಗಳಾದವು.ನಾವು ಹೊಸದಾಗಿ ನಗರ ಪ್ರದೇಶಕ್ಕೆ ಹೋದ ಬಳಿಕ ನನಗೆ ತುರ್ತಾಗಿ ಎದುರಾದ ಸಮಸ್ಯೆಯೇ ಹಾಲಿನದು.ಇಷ್ಟುದಿನ ನಾವು ಇತ್ತ ನಗರವೂ ಅಲ್ಲಾ ಅತ್ತ ಹಳ್ಳಿಯೂ ಅಲ್ಲಾ ಎಂಬಂತಹಾ ಪಟ್ಟಣದಲ್ಲಿದ್ದೆವು.ಇಲ್ಲಿ ಕೊಗಳತೆಯಲ್ಲೇ ಎಲ್ಲ ವಸ್ತುಗಳೂ ಲಭ್ಯವಾಗುತ್ತಿದ್ದವು.ನಮಗೆ ಮನೆ ನಿರ್ವರಣೆ ಕಷ್ಟವೆಂದೆನಿಸಲಿಲ್ಲಾ.ಯಾವಾಗ ನಗರಕ್ಕೆ ನಿವಾಸ ವರ್ಗವಾಯಿತೋ ಆಗ ನನಗಂತೂ ಅನೇಕ ತೊಡರು ತೊಡಕುಗಳು ಕಾಡತೊಡಗಿದವು. ಪ್ರತಿದಿನ ಇವರನ್ನು ಕಾಣಲು ಬರುವ ಸ್ನೇಹಿತರು, ಬಂಧುಗಳು ಪರಿಚಿತರೆಂದು ಸುಮಾರು ಜನ ಬಂದು ಹೋಗುತ್ತಿರುತ್ತಾರೆ. ಅಂದ ಬಳಿಕ ಅವರಿಗೆಲ್ಲಾ ಕಾಫಿ ತಿಂಡಿ ಸರಬರಾಜು ಮಾಡಲೇ ಬೇಕಲ್ಲಾ. ಏನಿಲ್ಲವೆಂದರೂ ಕೇವಲ ಕಾಫಿಯನ್ನಾದರೂ ಕೊಡಲೇ ಬೇಕು. ಅದು ಪರಂಪರಾನುಗತ ರೂಢಿಯಲ್ಲವೇ.ಆದರೆ ಕಾಫಿಪುಡಿ ಬೆಲ್ಲ ಸಕ್ಕರೆಗಳ ಸಮಸ್ಯೆಯಿಲ್ಲಾ ಹಾಲಂತೂ ಬೇಕಲ್ಲಾ.ಇಲ್ಲಿ ಮೊದಲಿದ್ದ ಊರಲ್ಲಿ ಎರಡು ಮೂರು ಕಡೆ ಪೇಟೆ ಚೌಕಿಗಳಲ್ಲಿ ಮುಂಜಾನೆ ಸಂಜೆಗಳಲ್ಲಿ ರೈತರಿಂದ ಕೊಂಡು ನೇರವಾಗಿ ಗ್ರಾಹಕರಿಗೆ ಮಾರುವ ಹಾಲು ಮಾರಾಟ ಕೇಂದ್ರಗಳಿದ್ದವು.ಹಾಲಿನ ದರವೂ ಪ್ಯಾಕೆಟ್ಟಿನ ಹಾಲಿಗಿಂತ ಕಡಿಮೆ.ಹಾಲು ತಾಜಾವಾಗಿರುತ್ತಿತ್ತು.ಅಲ್ಲದೇಲ್ಯಾಕ್ಟೋ ಮೀಟರ್ ಹಾಕಿ ಪರೀಕ್ಷಿಸುತ್ತಿದ್ದಕಾರಣ ಹಾಲು ಗಟ್ಟಿಯಾಗೇ ಇರುತ್ತಿತ್ತು.ಮುಖ್ಯವಾಗಿ ನನಗೆ ಹಾಲು ಕಾಯಿಸಿದಾಗ ಕೆನೆಗಟ್ಟಿ ,ಮೊಸರು ಕಡೆದಾಗ ಬೆಣ್ಣೆಯ ಅಂಶ ಹೆಚ್ಚಾಗಿರುತ್ತಿತ್ತು ಹಾಗಾಗಿ ಮನೆಗೆ ಆಗುವಷ್ಟು ತುಪ್ಪ ಮನೆಯಲ್ಲೇ ಮಾಡಿಕೊಳ್ಳುತ್ತಿದ್ದೆ.ಮಕ್ಕಳು ಮನೆಗೆ ಬಂದಾಗೆಲ್ಲಾ ಇಷ್ಟಪಟ್ಟು ತುಪ್ಪ ತಿನ್ನುತ್ತಿದ್ದರು.ಮರಳು ಮರಳಾಗಿರುತ್ತಿದ್ದ ತುಪ್ಪ, ಅದರ ಕಂಪು ಎಲ್ಲರಿಗೂ ಬಹಳ ಇಷ್ಟವಾಗುತ್ತಿತ್ತು. ಆದರೆ ನಗರ ಗಳಲ್ಲಿ ಗ್ರಾಮೀಣ ಸೌಲಭ್ಯಗಳನ್ನರಸಬಹುದೇ?.ಸರಿ ಪ್ಯಾಕೆಟ್ಟು ಹಾಲಿನ ಮೊರೆಹೋಗಿದ್ದಾಯ್ತು.ಆದರೆ ಅದೇಕೋ ನನಗೂ ಪ್ಯಾಕೆಟ್ ಹಾಲಿಗೂ ಕೂಡಿ ಬರುವುದೇ ಇಲ್ಲಾ.ಕಾರಣ ಸ್ವಲ್ಪ ಹೆಚ್ಚು ಕಡಿಮೆಯಾದರೂ ಹಾಲು ಒಡೆಯುವುದು.ಬೆಣ್ಣೆಯ ಅಂಶ ಇಲ್ಲದಿರುವುದು.ಸಂರಕ್ಷಿಸಿಟ್ಟುಕೊಳ್ಳುವ ಸವಾಲಿಂದಾಗಿ ನನಗೆ ಮೇಲಿಂದ ಮೇಲೆ ಹಾಲಿನ ಸಮಸ್ಯೆ ಯಾಗುತ್ತಿತ್ತು.ಆದರೆ ಮಾಡುವುದೇನು.?ನಮ್ಮ ಪಕ್ಕದ ಮನೆ ಯವರು ಹಳ್ಳಿಯವರಿಂದ ಹಾಲು ಕೊಳ್ಳುತ್ತಿದ್ದರು.ಆದರೆ ಆತ ನಮಗೆ ಹಾಲನ್ನು ಕೊಡಲು ಒಪ್ಪಲಿಲ್ಲಾ.ಕಾರಣ ಆತನಲ್ಲಿನ ಹಾಲಿನ ಕೊರತೆ.ಸರಿ ಅಂತೂ ಇಂತೂ ಕೊನೆಗೊಬ್ಬ ವ್ಯಕ್ತಿ ಹಾಲು ವರ್ತನೆಗೆ ಸಿಕ್ಕಿದ.ನನಗೆ ಬಹಳ ಸಂತಸ ವಾಯ್ತು.ಹಾಲಿನ ದರವೂ ಪರವಾಗಿಲ್ಲಎನಿಸಿತು .ನಮ್ಮ ಮನೆಗೆ ಸನಿಹದಲ್ಲಿರುವ ಗ್ರಾಮ ವಾಸಿಈತ.ಸರಿ ನಾನು ಪತಿರಾಯರನ್ನು ಕರೆದುಕೊಂಡು ಅಂದೇ ಮದ್ಯಾಹ್ನ ಅವರ ಮನೆ ಹುಡುಕಿಕೊಂಡು ಹಳ್ಳಿಗೆ ಹೋದೆವು.ಆಗ ಹಾಲಿನ ಮನುಷ್ಯ ಮನೆಯಲ್ಲಿರಲಿಲ್ಲಾ.ಅವರ ಮನೆ ಕೊಟ್ಚಿಗೆ ನೋಡಿದೆನು.ಕಲ್ಲು ಹಾಸಿನ ನೆಲ .ಎಲ್ಲಾ ಕಸಗುಡಿಸಿ ಸ್ವಚ್ಚಮಾಡಿತ್ತು.ಹಸುಗಳು ಮೇಯಲು ಹೋಗಿದ್ದವು.ಕೊಟ್ಟಿಗೆಯನ್ನು ತೊಳೆದಿದ್ದರು.ಕನ್ವಡಿಯಂತೆ ನೆಲ ಸ್ವಚ್ಚವಾಗಿತ್ತು.ಸ್ವಲ್ಪದೊರದಲ್ಲಿ ತಿಪ್ಪೆಯಿತ್ತು ಹುಲ್ಲುಬಣವೆಯೂ ಮನೆಗೆ ಸಮೀಪದಲ್ಲಿತ್ತು ಎಳೆಕರುಗಳು ಮಾತ್ರ ಕೊಟ್ಟಿಗೆಯಲ್ಲಿದ್ದವು.ಸರಿ ಕೊಟ್ಟಿಗೆಯ ಸ್ವಚ್ಚತೆ ಮನಸ್ಸಿಗೆ ಹಿಡಿಸಿತು.ಹಾಲಿನ ಮನುಷ್ಯನೇ ಎಲ್ಲಾ ಕೆಲಸ ಮಾಡುವುದಾಗಿ ತಿಳಿಯಿತು.ಎಲ್ಲಾ ಕೆಲಸ ಮಾಡಿ ಹಾಲು ಕರೆದು ನಗರಕ್ಕೆ ಬಂದು ಮಾರಾಟಮಾಡಿ ವಾಪಾಸಾದ ತಕ್ಷಣ ಹಸುಗಳನ್ನು ಹೊರಗೆ ಹೊಡೆದುಕೊಂಡು ಹೋಗುವುದು ತಿಳಿಯಿತು.ಸರಿ ಅಲ್ಲೇ ಇದ್ದ ಮನೆಯನ್ನು ಸೂಕ್ಷ್ಮವಾಗಿ ಗ್ರಹಿಸಿಕೊಂಡೆ.ಪರವಾಗಿಲ್ಲಾ ಜನ ಒಪ್ಪ ಓರಣ ಸ್ವಚ್ಚತೆಯನ್ನು ಪಾಲಿಸುತ್ತಾರೆಂದು ಖಚಿತವಾಯ್ತು.

ಮುಂದೆ ಬಂದಂತೆ ತಿಳಿದಿದ್ದೇನೆಂದರೆ.ಆತ ಸ್ಥಿತಿವಂತ.ಭತ್ತ ತೆಂಗಿನ ತೋಟವಿದ್ದಂತ ರೈತ ಕೃಷಿಕೆಲಸದ ಜೊತೆಗೆ ಉಪಕಸುಬಾಗಿ ಹೈನುಗಾರಿಕೆ ಮಾಡುವನು.ದಿನಂಪ್ರತಿ ನೂರು ಲೀ.ಹಾಲು ಅವನ ಮನೆಯಿಂದ ಮಾರಾಟವಾಗುತ್ತದೆಂದು ತಿಳಿಯಿತು.ಮನದಲ್ಲೇ ಮನುಷ್ಯನನ್ನು ಮೆಚ್ಚಿದೆ.ಸರಿ ಮಾರನೇ ದಿನದಿಂದ ನಮ್ಮನೆಗೂ ಹಾಲು ಬಂತು.ಆದರೆ ಬೆಣ್ಣೆಯು ಕೂಡಾ ದೊರೆಯತೊಡಗಿತು.ಮನುಷ್ಯ ನನಿಯತ್ತಿನವ. ಆಗಾಗ ಹಣಕ್ಕಾಗಿ ಪೀಡಿಸುವುದಿಲ್ಲಾ. ವಿನಾಕಾರಣ ಹಾಲು ತಪ್ಪಿಸುವುದಿಲ್ಲಾ.ಎಷ್ಟೇ ತಡವಾಗಲೀ ಹಾಲು ಬಂದೇ ಬರುತ್ತದೆ.ಅನಾವಶ್ಯಕ ಮಾತಿಲ್ಲಾ.ನಿಶ್ಚಿತ ಸಮಯಕ್ಕೆ ಕರಾರುವಾಕ್ಕಾಗಿ ಹಾಲು ಪೊರೈಕೆ ಖಚಿತ.ತೋಟ ತುಡಿಕೆ,ಗದ್ದೆಯ ದುಡಿತದೊಂದಿಗೆ ಹೈನುಗಾರಿಕೆಯ ವರಮಾನವೂ ಸೇರಿಆರ್ಥಿಕವಾಗಿ ಪರಿಸ್ಥಿತಿ ಸುಭಿಕ್ಷವಾಗಿತ್ತು ಕುಟುಂಬ.

ನಾನು ಇಷ್ಟೆಲ್ಲಾ ಹೇಳುತ್ತಿರುವುದು ನಾವೇನು ಆ ಕುಟುಂಬದೊಂದಿಗೆ ವ್ಯವಹಾರವಾಗಲೀ ಸಂಬಂಧವಾಗಲೀ ಮಾಡುತ್ತೇವೆಂದಲ್ಲಾ.ಒಂದು ಕೆಲಸ ಒಪ್ಪಿಕೊಂಡನಂತರ ಮನುಷ್ಯ ಇದನ್ನು ಹೇಗೆ ಪಾಲಿಸುತ್ತಾನೆಂಬುದನ್ನು ನಾವು ದೊಡ್ಡ ಜನರಿಂದಲೇ ತಿಳಿಯ ಬೇಕಿಲ್ಲಾ.ನಮ್ಮ ಬದುಕಿಗೆ ಪೊರಕವಾಗಿ ದುಡಿಯುತ್ತಿರುವ ಅನೇಕಾನೇಕ ವ್ಯಕ್ತಿಗಳು ಸಣ್ಣವರಾಗಿ ಕಾಣುತ್ತಾರಾದರೂ ಅವರನ್ನು ಅರಿತಾಗ ಅವರಲ್ಲಿನ ಸದ್ಗುಣ ಸಂಪನ್ನತೆ ಮನಕ್ಕೆ ನಾಟದೇ ಇರದು.ಬೇಕಾದಷ್ಟು ಬಡತನ ವಿದ್ದರೂ ದುಡಿಯಲಾಗದೇ ಸೋಗಲಾಡಿಯಂತೆ ಬದುಕುವ ಅದೆಷ್ಟೋ ಜನರನ್ನು ನೋಡುತ್ತೇವೆ.ಈಗೀಗ ಕೆಲಸಕ್ಕೆ ಬಾರದ ವಿದ್ಯಾವಂತರೂ ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ಮನೆಮನೆಯಲ್ಲೂ ಸಮಸ್ಯೆಯ ಸರಮಾಲೆಯಾಗಿ ಕಾಣುತ್ತಿರುವರು.ಮನಸ್ಸು ಮಾಡಿ ಇರುವ ಸಂಪನ್ಮೂಲ ಶಕ್ತಿ ಮತ್ತು ಸೌರಭ್ಯಗಳಿಂದ ಬಾಳನ್ನು ಹೇಗೆ ಕಟ್ಟಿಕೊಳ್ಳಬಹುದೆಂಬುದಕ್ಕೆ ನಾವೇನೂ ದೊರದೊರಿನ ತರಬೇತಿ ಕೇಂದ್ರಗಳಿಗೆ ಹೋಗಬೇಕಾದ್ದಿಲ್ಲವೆಂಬುದಕ್ಕೆ ಈ ಮಾತುಗಳನ್ನಿಲ್ಲಿ ಹೇಳಬೇಕಾಯಿತು.


Rate this content
Log in

Similar kannada story from Action